(ನ್ಯೂಸ್ ಕಡಬ) newskadaba.com, ಮೇ.07: ಆಭರಣ ಪ್ರಿಯರಿಗೆ ಇಂದು ಖುಷಿಯ ಸುದ್ದಿ ಸಿಕ್ಕಿದ್ದು, ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಏರಿಕೆಯಾಗಿದ್ದ ದರ ಇಂದು ಕಡಿಮೆಯಾಗಿರುವುದರಿಂದ ಖರೀದಿದಾರರು ಜುವೆಲ್ಲರಿ ಅಂಗಡಿಗಳತ್ತ ಮುಖ ಮಾಡಿದ್ದಾರೆ.
ಇಂದಿನ ದರ: 🔸 22 ಕ್ಯಾರೆಟ್ ಚಿನ್ನ – ₹13,975
18 ಕ್ಯಾರೆಟ್ ಚಿನ್ನ – ₹11,434
ಬೆಳ್ಳಿ – ₹261
ಅಂತರರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲೂ ದರದಲ್ಲಿ ಕುಸಿತ ದಾಖಲಾಗಿದೆ. ಮದುವೆ, ಶುಭಕಾರ್ಯ ಹಾಗೂ ಹೂಡಿಕೆಗೆ ಚಿನ್ನ ಖರೀದಿಸಲು ಇದು ಉತ್ತಮ ಅವಕಾಶ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.ದರ ಇಳಿಕೆಯಿಂದ ಗ್ರಾಹಕರಲ್ಲಿ ಖರೀದಿ ಉತ್ಸಾಹ ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿದೆ.









