ತಂದೆ-ಮಗಳ ಭಾವನಾತ್ಮಕ ಜರ್ನಿ; ‘ಲವ್ ಮಾಕ್ಟೇಲ್ 3’ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌



(ನ್ಯೂಸ್‌ ಕಡಬ) newskadaba.com,  ಮೇ 01: ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ ಸಿನಿಮಾ ‘ಲವ್ ಮಾಕ್ಟೇಲ್ 3’ (Love Mocktail 3) ಮಾರ್ಚ್ 19ರಂದು ತೆರೆ ಕಂಡಿತ್ತು. ‘ಲವ್ ಮಾಕ್ಟೇಲ್’ ಹಾಗೂ ‘ಲವ್ ಮಾಕ್ಟೇಲ್ 2’ ಸೀಕ್ವೆಲ್ ಇದು. ಲವ್ ಮಾಕ್‌ಟೇಲ್ 3 ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿ ಹೊರಹೊಮ್ಮಿತು. . ಕ್ರಿಸ್‌ಮಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ (Darling Krishna) ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದೀಗ ಸಿನಿಮಾದ ಒಟಿಟಿ (OTT Release Date) ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.







‘ಲವ್‌ ಮಾಕ್ಟೇಲ್‌’ ಮೊದಲ ಸೀಕ್ವೆಲ್‌ನಲ್ಲಿ ತುಂಟಾಟ, ತರ್ಲೆ ಮಾಡಿದ್ದ ಡಾರ್ಲಿಂಗ್ ಕೃಷ್ಣ, ‘ಲವ್ ಮಾಕ್ಟೇಲ್ 2’ನಲ್ಲಿ ಭಾವನಾತ್ಮಕ ಸನ್ನಿವೇಶ ಇದ್ದಿತ್ತು. ಮೊದಲ ಲವ್ ಮಾಕ್ಟೇಲ್‌ನಲ್ಲಿ ಕೃಷ್ಣನ ತುಂಟಾಟ ನೋಡುತ್ತೇವೆ. ಲವ್‌ ಮಾಕ್ಟೇಲ್‌ 2ನಲ್ಲಿ ಕೃಷ್ಣ ಖಿನ್ನತೆಗೆ ಜಾರಿದನ್ನು ನೋಡುತ್ತೇವೆ. ಲವ್ ಮಾಕ್ಟೇಲ್ 3ನಲ್ಲಿ ಒಬ್ಬ ತಂದೆಯಾಗಿ ಡಾರ್ಲಿಂಗ್ ಕೃಷ್ಣನ ಪ್ರಬುದ್ಧತೆ ಇದೆ ಎಂದು ಸಿನಿಮಾ ನೋಡಿದವರು ಅಭಿಪ್ರಾಯ ಪಟ್ಟಿದ್ದರು.






ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದಾರೆ, ರಾಚೆಲ್ ಡೇವಿಡ್, ಅಮೃತ ಅಯ್ಯಂಗಾರ್, ಸಂವೃತಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಈ ಸಿನಿಮಾ ಜೀ ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

error: Content is protected !!
Scroll to Top