ಟ್ರಂಪ್ ಹತ್ಯೆಗೆ ಯತ್ನ: ಅಪರಾಧ ಸಾಬೀತಾದರೆ ಆರೋಪಿಗೆ ಜೀವಾವಧಿ ಶಿಕ್ಷೆ



(ನ್ಯೂಸ್‌ ಕಡಬ) newskadaba.com,  ಎ.28   ಶ್ವೇತಭವನದ ಪತ್ರಿಕಾ ಭೋಜನಕೂಟದ ವೇಳೆ ಗುಂಡಿನ ದಾಳಿ ನಡೆಸಿದ್ದ ಕ್ಯಾಲಿಫೋರ್ನಿಯಾದ ಕೋಲ್ ತೋಮಸ್ ಅಲೆನ್(31) ವಿರುದ್ಧ ಅಮೆರಿಕದ ಫೆಡರಲ್ ನ್ಯಾಯಾಲಯವು ‘ಅಧ್ಯಕ್ಷರ ಹತ್ಯೆ ಯತ್ನ’ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಿದೆ. ಈ ಅಪರಾಧಗಳು ಸಾಬೀತಾದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.







ಸೋಮವಾರ ವಾಷಿಂಗ್ಟನ್‌ನ ಫೆಡರಲ್ ನ್ಯಾಯಾಲಯಕ್ಕೆ ಅಲೆನ್‌ನನ್ನು ಹಾಜರುಪಡಿಸಲಾಯಿತು. ಹಂಗಾಮಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಅವರ ಪ್ರಕಾರ, ಅಲೆನ್ ಈ ದಾಳಿಗಾಗಿ ವ್ಯವಸ್ಥಿತ ಸಿದ್ಧತೆ ನಡೆಸಿದ್ದ.ದಾಳಿಗೂ ಮುನ್ನ ತನ್ನ ಕುಟುಂಬಕ್ಕೆ ಕಳುಹಿಸಿದ ಪ್ರಣಾಳಿಕೆಯಲ್ಲಿ ತನ್ನನ್ನು ‘ಫ್ರೆಂಡ್ಲಿ ಫೆಡರಲ್ ಅಸಾಸಿನ್’ ಎಂದು ಹೇಳಿಕೊಂಡಿದ್ದ. ಅಧ್ಯಕ್ಷ ಟ್ರಂಪ್ ಅವರನ್ನು ದುಷ್ಟ ವ್ಯಕ್ತಿ ಎಂದು ಕರೆದಿದ್ದ ಆತ, ಆಡಳಿತದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ.






ಆರೋಪಿಯು ಕ್ಯಾಲಿಫೋರ್ನಿಯಾದಿಂದ ಚಿಕಾಗೋಗೆ ರೈಲಿನಲ್ಲಿ ಪ್ರಯಾಣಿಸಿ, ನಂತರ ವಾಷಿಂಗ್ಟನ್‌ಗೆ ಬಂದಿದ್ದ. ಕಾರ್ಯಕ್ರಮ ನಡೆಯುತ್ತಿದ್ದ ಹೋಟೆಲ್‌ನಲ್ಲಿ ಅತಿಥಿಯಾಗಿ ಚೆಕ್-ಇನ್ ಆಗಿದ್ದನು. ಆತ ಭದ್ರತಾ ಬ್ಯಾರಿಕೇಡ್‌ಗಳನ್ನು ದಾಟಿ ಓಡಿಬಂದು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

error: Content is protected !!
Scroll to Top