ಮಂಗಳೂರು : ಮೇ 4 ರಿಂದ 9 ವರೆಗೆ ‘ಕರಾವಳಿ ಕಲೋತ್ಸವ 2026’



(ನ್ಯೂಸ್‌ ಕಡಬ) newskadaba.com,  ಎ.20: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರಲೋಕ’ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಚಿಣ್ಣರಲೋಕ ಸೇವಾ ಬಂಧು (ರಿ.) ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕಲೋತ್ಸವ 2026 ತುಳು, ಕೊಂಕಣಿ, ಬ್ಯಾರಿ, ಅರೆ ಭಾಷೆ ಅಕಾಡೆಮಿ ಸಹಯೋಗಯೊಂದಿಗೆ ಬಹುಸಂಸ್ಕೃತಿ ಉತ್ಸವ ಹಾಗೂ ಆಹಾರ ಮೇಳ ಮೇ 4 ರಿಂದ 9 ವರೆಗೆ ಬಿ.ಸಿ ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ. ಇನ್ನು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮಂಗಳೂರಿನಲ್ಲಿ ನೆರವೇರಿಸಿದರು.







ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾಧಿಕಾರಿ ದರ್ಶನ್ ಎಚ್ .ವಿ. ಮಂಗಳೂರು ಪೊಲೀಸ್ ಅಯುಕ್ತ ಸುಧೀರ್ ಕುಮಾರ್ ರೆಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ವೇಳೆ ಕರಾವಳಿ ಕಲೋತ್ಸವ ಇದರ ಸ್ವಾಗತ ಸಮಿತಿಯ ಅಧ್ಯಕ್ಷ ಕಾಂತಾಡಿ ಗುತ್ತು ಸೀತಾರಾಮ್ ಶೆಟ್ಟಿ, ಬ್ಯಾರಿ ಸಾಹಿತ್ಯ ಸಂಭ್ರಮದ ಅಧ್ಯಕ್ಷ ಅಬ್ದುಲ್ ರಜಾಕ್ ಕುಕ್ಕಾಜೆ , ಸಂಸ್ಥೆಯ ನಿರ್ದೇಶಕರಾದ ಶೋಭಾ ಶೆಟ್ಟಿ , ಚಿಣ್ಣರ ಲೋಕ ಸಂಸ್ಥೆಯ ಸ್ಥಾಪಕಧ್ಯಕ್ಷರಾದ ಮೋಹನ ದಾಸ ಕೊಟ್ಟಾರಿ ಮುನ್ನೂರು ಉಪಸ್ಥಿತರಿದ್ದರು.






error: Content is protected !!
Scroll to Top