(ನ್ಯೂಸ್ ಕಡಬ) newskadaba.com, ಎ.20: ಭಾರತದಲ್ಲಿ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿ ಮಾಡಬೇಕೆಂದು ಜನರು ಕಾಯುತ್ತಿರುತ್ತಾರೆ. ಈ ವಿಶೇಷ ದಿನದಂದು ಬೆಲೆ ಎಷ್ಟೇ ಆಗಿದ್ರೂ ಜನರು ಕನಿಷ್ಠ 1 ಗ್ರಾಂನಷ್ಟು ಚಿನ್ನವನ್ನು ಖರೀದಿ ಮಾಡುತ್ತಿದ್ದಾರೆ. ಅಕ್ಷಯ ತೃತೀಯ ಮರುದಿನವಾದ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.
ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 4,900 ರೂ.ಗಳಷ್ಟು ಕಡಿಮೆಯಾಗಿದೆ. ಚಿನ್ನದ ಬೆಲೆಗಳು ನಗರದಿಂದ ನಗರಕ್ಕೆ ಭಿನ್ನವಾಗಿರುತ್ತವೆ. ಹಾಗೆಯೇ 18, 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
1 ಗ್ರಾಂ: 14,235 ರೂಪಾಯಿ
8 ಗ್ರಾಂ: 1,13,880 ರೂಪಾಯಿ
10 ಗ್ರಾಂ: 1,42,350 ರೂಪಾಯಿ
100 ಗ್ರಾಂ: 14,23,500 ರೂಪಾಯಿ
1 ಗ್ರಾಂ: 15,529 ರೂಪಾಯಿ
8 ಗ್ರಾಂ: 1,24,232 ರೂಪಾಯಿ
10 ಗ್ರಾಂ: 1,55,290 ರೂಪಾಯಿ
100 ಗ್ರಾಂ: 15,52,900 ರೂಪಾಯಿ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,43,000 ರೂಪಾಯಿ, ಮುಂಬೈ: 1,42,350 ರೂಪಾಯಿ, ದೆಹಲಿ: 1,42,500 ರೂಪಾಯಿ, ಕೊಲ್ಕತ್ತಾ: 1,42,350 ರೂಪಾಯಿ, ಬೆಂಗಳೂರು: 1,42,350 ರೂಪಾಯಿ, ಪುಣೆ: 1,42,350 ರೂಪಾಯಿ, ಹೈದರಾಬಾದ್: 1,42,350 ರೂಪಾಯಿ, ವಡೋದರಾ: 1,42,400 ರೂಪಾಯಿ, ಅಹಮದಾಬಾದ್: 1,42,400 ರೂಪಾಯಿ ಆಗಿದೆ.
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ರೆ, ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಇಂದು ದೇಶದಲ್ಲಿ ಬೆಳ್ಳಿ ದರ ಈ ಕೆಳಗಿನಂತಿದೆ
10 ಗ್ರಾಂ: 2750 ರೂಪಾಯಿ
100 ಗ್ರಾಂ: 27,500 ರೂಪಾಯಿ
1000 ಗ್ರಾಂ: 2,75,000 ರೂಪಾಯಿ









