ಯುದ್ಧದ ಪರಿಣಾಮ: ಪುತ್ತೂರು ಬೈಪಾಸ್‌ನಲ್ಲಿ ಇಂಧನಕ್ಕಾಗಿ ಆಟೋ ರಿಕ್ಷಾಗಳ ದೀರ್ಘ ಸಾಲು



(ನ್ಯೂಸ್‌ ಕಡಬ) newskadaba.com,  ಎ.04: ಪುತ್ತೂರು: ಜಾಗತಿಕ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಪುತ್ತೂರು ಬೈಪಾಸ್ ರಸ್ತೆಯಲ್ಲಿ ಆಟೋ ರಿಕ್ಷಾಗಳ ದೀರ್ಘ ಸಾಲು ಕಂಡುಬಂದಿದೆ.







ಬೆಳಿಗ್ಗೆಯಿಂದಲೇ ನೂರಾರು ಆಟೋ ರಿಕ್ಷಾಗಳು ಇಂಧನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದು, ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಇಂಧನದ ಅಭಾವದಿಂದ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ಪ್ರಯಾಣಿಕರಿಗೂ ತೊಂದರೆ ಉಂಟಾಗಿದೆ.






ಯುದ್ಧದ ಪರಿಣಾಮ ಸ್ಥಳೀಯ ಸಾರಿಗೆ ವ್ಯವಸ್ಥೆಯ ಮೇಲೂ ಬೀರಿದ್ದು, ಸಾಮಾನ್ಯ ಜನರ ದೈನಂದಿನ ಜೀವನದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: Content is protected !!
Scroll to Top