ಮಂಗಳೂರು : ಮಹಡಿಯಿಂದ ಹಾರಿ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ



(ನ್ಯೂಸ್ಕಡಬ) newskadaba.com, ಮಾ 31 :ನಗರದ ಅತ್ತಾವರದ ಅಪಾರ್ಟ್‌ಮೆಂಟ್ ವೊಂದರ 12ನೇ ಮಹಡಿಯಿಂದ ಹಾರಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿರುವುದು ವರದಿಯಾಗಿದೆ. ಕೋಲ್ಕತ್ತಾ ಮೂಲದ ಸಾರ್ಥಕ್ ಮೌರ್ಯ (23) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ ಎಂದು ತಿಳಿದು ಬಂದಿದೆ..







ನಗರದ ಖಾಸಗಿ ವೈದ್ಯಕೀಯ ಕಾಲೇಜಿನ 4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಈತ ಸೋಮವಾರ ಮಧ್ಯಾಹ್ನದ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದ್ದು, ಘಟನೆಗೆ ನೈಜ ಕಾರಣ ತಿಳಿದು ಬಂದಿಲ್ಲ. ಖಾಸಗಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಸಾರ್ಥಕ್ ಶಿಕ್ಷಣ ಪಡೆಯುತ್ತಿದ್ದರು.






ಗೆಳತಿಯ ಮನೆಗೆ ಹೋಗುವ ಬಗ್ಗೆ ಎಂಟ್ರಿ ಮಾಡಿ ಆಕೆ ಇದ್ದ ಹನ್ನೆರಡನೇ ಮಹಡಿ ಕಡೆಗೆ ತೆರಳಿದ್ದಾರೆ. ಆದರೆ ಆಕೆಯ ಮನೆಗೆ ಹೋಗುವ ಬದಲು ವಿರುದ್ಧ ದಿಕ್ಕಿಗೆ ತೆರಳಿ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top