(ನ್ಯೂಸ್ ಕಡಬ) newskadaba.com, ಮಾ 31 : ಮಂಗಳೂರು ಅಂಚೆ ವಿಭಾಗವು ಕರಾವಳಿ ಕರ್ನಾಟಕದ ಮೊದಲ ಅತ್ಯಾಧುನಿಕ ನ್ಯೂಜೆನ್ (ಎನ್- ಜೆನ್) ಅಂಚೆ ಕಚೇರಿಯನ್ನು ಸುರತ್ಕಲ್ ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ಸಿದ್ಧಗೊಳಿಸಿದ್ದು, ಸೋಮವಾರ ಉದ್ಘಾಟನೆಗೊಂಡಿತು..
ಎನ್-ಜೆನ್ ಕಚೇರಿ ಸುರತ್ಕಲ್‌ನಲ್ಲಿ ಕಾರ್ಯಾರಂಭ
ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗೀತಂ ವಿಶ್ವವಿದ್ಯಾನಿಲಯ ಮತ್ತು ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಎನ್- ಜೆನ್ ಅಂಚೆ ಕಚೇರಿ ಸ್ಥಾಪನೆಯ ಬಳಿಕ ನಾಲ್ಕನೇ ಎನ್-ಜೆನ್ ಕಚೇರಿ ಸುರತ್ಕಲ್‌ನಲ್ಲಿ ಕಾರ್ಯಾರಂಭ ಮಾಡಿದೆ.
ಏನೆಲ್ಲಾ ಸೌಲಭ್ಯಗಳು ಇರಲಿವೆ?
ಈ ಕಚೇರಿಯು ಉಚಿತ ಹೈಸ್ಪೀಡ್ ವೈಫೈ ಮತ್ತು ಸ್ವಯಂ ಬುಕಿಂಗ್ ಕಿಯೋತ್ಸ್, ಆಧುನಿಕವಾಗಿ ಬರೆಯುವ ಸ್ಥಳ, ವಿಶ್ರಾಂತಿಗಾಗಿ ಲಾಬಿ ಹಾಗೂ ಸ್ಫೂರ್ತಿದಾಯಕ ಪುಸ್ತಗಳನ್ನು ಒಳಗೊಂಡಿರುವ ಗ್ರಂಥಾಲಯವನ್ನು ಹೊಂದಿದೆ. ಜತೆಗೆ ಪ್ರತ್ಯೇಕ ಗೇಮ್ ಝೋನ್, ಸಾಂಪ್ರದಾಯಿಕ ಅಂಚೆ ಪೆಟ್ಟಿಗೆ ಹಾಗೂ ಜೆನ್-ಝಡ್ ವಿದ್ಯಾರ್ಥಿಯ ವಿಶೇಷ ಚಿತ್ರವಿರುವ ಸೆಲ್ಫಿ ಪಾಯಿಂಟ್ ಇರಲಿದೆ.









