ಕಳವಾಗಿದ್ದ ಮೊಬೈಲ್’ನ್ನು ಮಾಲೀಕನಿಗೆ ಹಸ್ತಾಂತರಿಸಿದ ರೈಲ್ವೆ ಪೊಲೀಸರು



(ನ್ಯೂಸ್ ಕಡಬ) newskadaba.com ಮಾ. 14. ಕಳುವಾಗಿದ್ದ ಮೊಬೈಲ್ ಫೋನ್ ಒಂದನ್ನು ಪತ್ತೆಹಚ್ಚಿದ ರೈಲ್ವೇ ಪೊಲೀಸರು ಅದರ ಅಸಲಿ ಮಾಲೀಕನಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.





ಕೇಂದ್ರ ಉಪಕರಣ ಗುರುತಿನ ನೋಂದಣಿ (ಸಿಇಐಆರ್) ಪೋರ್ಟಲ್‌ಬನಲ್ಲಿ ದಾಖಲಾದ ದೂರು ಮತ್ತು ಸೈಬರ್ ಸೆಲ್ ಅಧಿಕಾರಿ ಅನಿಲ್ ಸೇನ್ ನೀಡಿದ ಮಾಹಿತಿಯ ಆಧಾರದ ಮೇಲೆ ರೈಲ್ವೆ ಪೊಲೀಸರು ಈ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.






ಅಜಿತ್ ಎಂಬವರು 2025ರ ಮೇ ತಿಂಗಳಲ್ಲಿ ತಮ್ಮ ಕುಟುಂಬದೊಂದಿಗೆ ಮುಂಬೈನಿಂದ ತಿರುವನಂತಪುರಕ್ಕೆ ಪ್ರಯಾಣಿಸುತ್ತಿದ್ದಾಗ, ತನ್ನ ಮೊಬೈಲ್ ಫೋನ್, 25,000 ರೂ. ನಗದು ಮತ್ತು ಇತರ ಸಾಮಗ್ರಿಗಳು ಕಳ್ಳತನವಾಗಿದ್ದವು.

ಈ ಬಗ್ಗೆ ರೈಲ್ವೆ ರಕ್ಷಣಾ ಪಡೆಗೆ ದೂರು ನೀಡಲಾಗಿತ್ತು. ದೂರಿನನ್ವಯ ಕಾರ್ಯಪ್ರವೃತ್ತರಾದ ಸೈಬರ್ ಸೆಲ್ ಪೊಲೀಸರು ಕಾರ್ಯಾಚರಣೆ ನಡೆಸಿದಾಗ, ಮೊಬೈಲ್ ಫೋನ್ ಅರ್ಕುಳದಲ್ಲಿ ಮೊಬೈಲ್ ಶಾಪ್ ನಡೆಸುತ್ತಿದ್ದ ವ್ಯಕ್ತಿಯೋರ್ವರ ಬಳಿಯಿರುವುದು ಪತ್ತೆಯಾಗಿದೆ. ಈ ಕುರಿತು ವಿಚಾರಣೆ ನಡೆಸಿದಾಗ, ಉಡುಪಿ ಮೂಲದ ಪ್ರಹ್ಲಾದ್ ಎಂಬ ವ್ಯಕ್ತಿ ಈ ಫೋನನ್ನು ಅನ್ಸಾರ್‌ಗೆ 5,000 ರೂ. ಗೆ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ.

ಪತ್ತೆ ಹಚ್ಚಲಾದ ಮೊಬೈಲ್ ಫೋನ್ ಅನ್ನು ರೈಲ್ವೆ ಪೊಲೀಸರು ಇದೀಗ ದೂರುದಾರರ ಸಂಬಂಧಿ, ಮುಂಬೈ ನಿವಾಸಿ ವಿಕಾಸ್ ತ್ರಿಲೋಕ್ ಕುಮಾರ್ ಅವರ ಮೂಲಕ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.

error: Content is protected !!
Scroll to Top