ಕ್ರೀಡಾಪಟು ಓಂಕಾರ ಯೋಗರಾಜ್ ಅವರಿಗೆ ಸನ್ಮಾನ



(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 28. ಐಸ್ ಸ್ಕೇಟಿಂಗ್ ಕ್ರೀಡಾಪಟು ಓಂಕಾರ ಯೋಗರಾಜ್ ಅವರು ಜನವರಿ 20ರಿಂದ 26ರ ವರೆಗೆ ಲೇ-ಲಡಾಕ್‍ನಲ್ಲಿ ನಡೆದ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಟೇಟಿಂಗ್‍ನ 3000 ಮೀ. ರಿಲೇ ನಲ್ಲಿ ಬೆಳ್ಳಿ ಪದಕ ಹಾಗೂ 2000 ಮಿಕ್ಸ್ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.
ಅವರು ದೇವಹಂಸ ಸ್ಟೇಟಿಂಗ್ ಕ್ಲಬ್‍ನಲ್ಲಿ ತರಬೇತಿ ಪಡೆಯುತ್ತಿದ್ದು, ಸುಮನ್ ಶ್ರೀಕಾಂತ್ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತ  ಕೆ. ಶ್ರೀಕಾಂತ ರಾವ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಓಂಕಾರ ಯೋಗರಾಜ್ ಅವರನ್ನು ಸನ್ಮಾನಿಸಲಾಯಿತು.





error: Content is protected !!
Scroll to Top