(ನ್ಯೂಸ್ ಕಡಬ) newskadaba.com, ಫೆ.14: ಕನ್ನಡ ಚಿತ್ರರಂಗದ ಹಿರಿಯ ಮತ್ತು ಪ್ರತಿಭಾವಂತ ನಿರ್ದೇಶಕ ಜೋ ಸೈಮನ್ ಅವರ ಅಗಲಿಕೆ ಸ್ಯಾಂಡಲ್ವುಡ್ಗೆ ತುಂಬಲಾರದ ನಷ್ಟ.
ಜೋ ಸೈಮನ್ ಅವರು ಕೇವಲ ನಿರ್ದೇಶಕರಾಗಿ ಮಾತ್ರವಲ್ಲದೆ, ನಟರಾಗಿ, ಗೀತರಚನೆಕಾರರಾಗಿ ಮತ್ತು ಸಾಹಸ ನಿರ್ದೇಶಕರಾಗಿಯೂ ಗುರುತಿಸಿಕೊಂಡವರು. ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ.
ವಿಧಿಯಾಟವೆಂಬಂತೆ, ಚಿತ್ರರಂಗದ ಕುರಿತು ನಡೆದ ಸಭೆಯೊಂದರಲ್ಲೇ (ಫಿಲಂ ಚೇಂಬರ್) ಅವರಿಗೆ ಹೃದಯಾಘಾತ ಸಂಭವಿಸಿತು. 80ನೇ ವಯಸ್ಸಿನಲ್ಲಿ ಅವರು ಕೆಲಸದ ನಡುವೆಯೇ ಇಹಲೋಕ ತ್ಯಜಿಸಿದ್ದು ಅವರ ಚಿತ್ರಪ್ರೇಮಕ್ಕೆ ಸಾಕ್ಷಿಯಾಗಿದೆ.








