ದೇಶದಾದ್ಯಂತ ಚಿನ್ನದ ಮೇಲೆ ಲೋನ್ ಗೆ 6 ಹೊಸ ರೂಲ್ಸ್! 2026 ರಿಂದಲೇ ಜಾರಿ.



(ನ್ಯೂಸ್‌ ಕಡಬ) newskadaba.com,ಡಿ.30 ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಹೊರಡಿಸಿರುವ ಮಹತ್ವದ ಆದೇಶವೊಂದು ಚಿನ್ನದ ಸಾಲದ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ.





ಸಾಮಾನ್ಯವಾಗಿ ಚಿನ್ನದ ಸಾಲದ ನಿಯಮಗಳು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಬೇರೆ ಬೇರೆಯಾಗಿರುತ್ತಿದ್ದವು. ಆದರೆ, ಈ ಗೊಂದಲಗಳನ್ನು ನಿವಾರಿಸಲು ಮತ್ತು ಗ್ರಾಹಕರ ಹಿತರಕ್ಷಣೆಗೆ ಆರ್‌ಬಿಐ ಒಂದು ಕಠಿಣ ಹೆಜ್ಜೆ ಇಟ್ಟಿದೆ.






ಆರ್‌ಬಿಐ ‘ಮಾಸ್ಟರ್ ಡೈರೆಕ್ಷನ್ ಆನ್ ಗೋಲ್ಡ್ ಲೋನ್’ ಎಂಬ ಹೊಸ ಸಮಗ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ನಿಯಮಗಳನ್ನು ಜಾರಿಗೆ ತರಲು ಬ್ಯಾಂಕ್‌ಗಳಿಗೆ 2026ರ ಏಪ್ರಿಲ್ 1ರವರೆಗೆ ಕಾಲಾವಕಾಶ ನೀಡಲಾಗಿದೆ. ಅಂದರೆ, 2026ರ ಏಪ್ರಿಲ್ 1ರಿಂದ ದೇಶದಾದ್ಯಂತ ಒಂದೇ ರೀತಿಯ ಚಿನ್ನದ ಸಾಲದ ನಿಯಮಗಳು ಜಾರಿಯಾಗಲಿವೆ.

ಈ ಬದಲಾವಣೆಗಳು ಗ್ರಾಹಕರ ಪರವಾಗಿಯೇ ಇವೆ. ವಿಶೇಷವಾಗಿ ₹2.5 ಲಕ್ಷದೊಳಗಿನ ಸಾಲ ಪಡೆಯುವವರಿಗೆ ಹೆಚ್ಚು ಹಣ ಸಿಗಲಿದೆ ಮತ್ತು ಅಡವಿಟ್ಟ ಚಿನ್ನ ಸುರಕ್ಷಿತವಾಗಿ, ಸಮಯಕ್ಕೆ ಸರಿಯಾಗಿ ವಾಪಸ್ ಸಿಗುವುದು ಖಾತ್ರಿಯಾಗಲಿದೆ. ಆದರೆ, ಈ ನಿಯಮಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲು 2026ರ ಏಪ್ರಿಲ್ 1ರವರೆಗೆ ಕಾಯಬೇಕಿದೆ.

error: Content is protected !!
Scroll to Top