ಸೈನಿಕ್ ಶಾಲೆ ನೇಮಕಾತಿ 2026: ಟೀಚರ್ ಮತ್ತು ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನ



(ನ್ಯೂಸ್‌ ಕಡಬ) newskadaba.com,ಡಿ.30:  ಮನೆಯಲ್ಲಿ ಕೆಲಸವಿಲ್ಲದೆ ಕುಳಿತಿರುವ ಪದವೀಧರರು ಅಥವಾ 10ನೇ ತರಗತಿ ಪಾಸಾದ ಅಭ್ಯರ್ಥಿಗಳಿದ್ದಾರೆಯೇ? ಪ್ರತಿಷ್ಠಿತ ಸೈನಿಕ್ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬುದು ನಿಮ್ಮ ಕನಸೇ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇದೆ. ವಿಜಯಪುರ ಸೈನಿಕ್ ಶಾಲೆಯು ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.





ಈ ನೇಮಕಾತಿಯಲ್ಲಿ ಕೇವಲ ಶಿಕ್ಷಕರಿಗೆ ಮಾತ್ರವಲ್ಲದೆ, ಇತರೆ ಸೇವಾ ವಿಭಾಗಗಳಿಗೂ ಆದ್ಯತೆ ನೀಡಲಾಗಿದೆ. PGT ಮತ್ತು TGT ಶಿಕ್ಷಕರು, ಸಂಗೀತ ಶಿಕ್ಷಕರು, ಕೌನ್ಸಿಲರ್, ವಾರ್ಡ್ ಬಾಯ್ಸ್ ಮತ್ತು ಮಹಿಳಾ ಅಭ್ಯರ್ಥಿಗಳಿಗಾಗಿ ನರ್ಸಿಂಗ್ ಸಿಸ್ಟರ್ ಹುದ್ದೆಗಳು ಲಭ್ಯವಿವೆ……..






ವಿದ್ಯಾರ್ಹತೆ ಮತ್ತು ವಯೋಮಿತಿ:ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ:

ಶಿಕ್ಷಕ ಹುದ್ದೆಗಳಿಗೆ: ಸಂಬಂಧಪಟ್ಟ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಜೊತೆಗೆ B.Ed ಮತ್ತು CTET/STET ಪಾಸಾಗಿರಬೇಕು.

ವಾರ್ಡ್ ಬಾಯ್ಸ್: ಕನಿಷ್ಠ 10ನೇ ತರಗತಿ ಪಾಸಾಗಿದ್ದರೆ ಸಾಕು.

ನರ್ಸಿಂಗ್ ಸಿಸ್ಟರ್: ನರ್ಸಿಂಗ್‌ನಲ್ಲಿ ಡಿಪ್ಲೊಮಾ ಅಥವಾ ಬಿ.ಎಸ್ಸಿ ಮಾಡಿರಬೇಕು.

ವಯೋಮಿತಿ:  ಶಿಕ್ಷಕ ಹುದ್ದೆಗಳಿಗೆ 21 ರಿಂದ 40 ವರ್ಷ ಹಾಗೂ ವಾರ್ಡ್ ಬಾಯ್ಸ್ ಮತ್ತು ನರ್ಸಿಂಗ್ ಹುದ್ದೆಗಳಿಗೆ ಗರಿಷ್ಠ 50 ವರ್ಷಗಳವರೆಗೂ ಅವಕಾಶ ನೀಡಲಾಗಿದೆ.

ಕೊನೆಯ ದಿನಾಂಕ 16-01-2026

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ನೀವು ssbj.in ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ “Principal, Sainik School Bijapur” ಹೆಸರಿನಲ್ಲಿ ₹500 ಡಿಮ್ಯಾಂಡ್ ಡ್ರಾಫ್ಟ್ (DD) ತೆಗೆದು ಕಳುಹಿಸಿಕೊಡಬೇಕು.

error: Content is protected !!
Scroll to Top