(ನ್ಯೂಸ್ ಕಡಬ) newskadaba.com,ಡಿ.30 :ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಕಳೆದ ವರ್ಷ ಡಾ.ಕೆ.ವಿ.ಚಿದಾನಂದರು ನೂತನ ಬ್ರಹ್ಮರಥ ಕೊಡುವವರೆಗೆ ಚಿನ್ನಕೇಶವ ದೇವರ ರಥವಾಗಿ ಜಾತ್ರೆಯ ಸಮಯದಲ್ಲಿ ಎಳೆಯಲ್ಪಡುತ್ತಿದ್ದ ಹಳೆಯ ರಥವು ಈಗ ಪುಷ್ಪರಥವಾಗಿ ರೂಪಾಂತರಗೊಂಡು ಮತ್ತೆ ಚೆನ್ನಕೇಶವ ದೇವಸ್ಥಾನಕ್ಕೆ ಬಂದಿದೆ.
ಕಳೆದ ವರ್ಷ ನೂತನ ಬ್ರಹ್ಮರಥ ಸುಳ್ಯಕ್ಕೆ ಬರುವ ಮೊದಲು ಹಳಿರಥವನ್ನು ಕುಂದಾಪುರಕ್ಕೆ ಕೊಂಡೊಯ್ದು ಕೋಟೇಶ್ವರದಲ್ಲಿರುವ ರಥ ಶಿಲ್ಪಿ ರಾಜಗೋಪಾಲಾಚಾರ್ಯರ ಪಕ ನೀಡಲಾಗಿತ್ತು. ಅದನ್ನು ಕಿರಿದುಗೊಳಿಸಿ. ದೇವಸ್ಥಾನದ ಒಳಭಾಗದಲ್ಲಿ ಭಕ್ತರ ಪುಸ್ತರದ ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಅದನ್ನು ಕಿರಿದುಗೊಳಿಸಿ ಪುಷ್ಪರಥವಾಗಿ ಪರಿವರ್ತಿಸುವ ಕಾರ್ಯವನ್ನು ರಥ ಶಿಲ್ಪಿ ರಾಜಗೋಪಾಲಾಚಾರ್ಯರು ಕೈಗೆತ್ತಿಕೊಂಡಿದ್ದು ಆದೀಗ ಪೂರ್ಣಗೊಂಡು ದ.23ರಂದು ಸುಳ್ಯ ತಲುಪಿದೆ.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರ ಡಾ.ಹರಪ್ರಸಾದ್ ತುದಿಯಡ್ಕ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹಾಗೂ ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದು ನೂತನ ರಥವನ್ನು ಸ್ವಾಗತಿಸಿದರು.ರಾಜಗೋಪಾಲಾಚಾರ್ಯರು ಮತ್ತು ಅವರ ಸಿಬ್ಬಂದಿ ರಥದೊಂದಿಗೆ ಕುಂದಾಪುರದಿಂದ ಬಂದಿದ್ದರು.ಈ ಬಾರಿಯ ಜಾತ್ರೋತ್ಸವದಲ್ಲಿ ಶ್ರೀ ಚೆನ್ನಕೇಶವ ದೇವರಿಗೆ ರಥ ಸಮರ್ಪಣೆಯಾಗಲಿದೆ…ಜಾತ್ರೋತ್ಸವದ ಸಂದರ್ಭದೇವಸ್ಥಾನದ ಹೊರಾಂಗಣದಲ್ಲಿ ಪುಷ್ಪರಥವನ್ನು ಎಳೆಯಲಾಗುವುದು.








