ಅಡ್ಡಹೊಳೆ: ಸೈಂಟ್ ಜಾರ್ಜ್ ಜಾಕೋಬೈಟ್ ಸಿರಿಯನ್ ಚರ್ಚ್‌ನ ► ಇಂದು ಮತ್ತು ನಾಳೆ ಸಂತ ಜಾರ್ಜರ ಸ್ಮರಣೆ ಹಬ್ಬ

(ನ್ಯೂಸ್ ಕಡಬ) newskadaba.com ಕಡಬ, ಮೇ.05. ಅಡ್ಡಹೊಳೆ‌ ಸೈಂಟ್ ಜಾರ್ಜ್ ಜಾಕೋಬೈಟ್ ಸಿರಿಯನ್ ಚರ್ಚ್‌ನಲ್ಲಿ ಸಂತ ಜಾರ್ಜರ ಸ್ಮರಣೆ ಹಬ್ಬವು ಇಂದು (ಮೇ 05) ಆರಂಭಗೊಂಡಿದ್ದು, ಭಾನುವಾರ ಅಪರಾಹ್ನ ಸಮಾಪನಗೊಳ್ಳಲಿದೆ.

ಇಂದು ಪೂರ್ವಾಹ್ನ‌ 7 ಗಂಟೆಗೆ ಪ್ರಭಾತ ಪ್ರಾರ್ಥನೆಯೊಂದಿಗೆ ಆರಂಭಗೊಂಡಿದ್ದು, ದಿವ್ಯ ಬಲಿಪೂಜೆ, ಹಾಗೂ ಧ್ವಜಾರೋಹಣ ನೆರವೇರಿದೆ. ಸಂಜೆ 06.30 ಕ್ಕೆ ಸಂಧ್ಯಾ ಪ್ರಾರ್ಥನೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಅಡ್ಡಹೊಳೆ ಮಲಂಕರ ಚರ್ಚಿಗೆ ವರ್ಣರಂಜಿತ ಮೆರವಣಿಗೆ ನಡೆಯಲಿದೆ. ಮೇ 06 ರಂದು ಪೂರ್ವಾಹ್ನ 8 ಗಂಟೆಗೆ ಪ್ರಭಾತ ಪ್ರಾರ್ಥನೆ ನೆರವೇರಲಿದ್ದು, 9 ಗಂಟೆಗೆ ಅತೀ ವಂದನೀಯ ಬಿಷಪ್‌ ರಾದ ಮರ್ಕೋಸ್ ಮೋರ್ ಕ್ರಿಸೋಸ್ಟಮೋಸ್ ರವರ ಯಾಜಕತ್ವದಲ್ಲಿ ದಿವ್ಯ ಬಲಿಪೂಜೆ‌ ನಡೆಯಲಿದೆ. ಆ ಬಳಿಕ ಮಧ್ಯಸ್ಥ ಪ್ರಾರ್ಥನೆ, ಹಬ್ಬದ ಸಂದೇಶ ನಡೆಯಲಿದ್ದು, 11 ಗಂಟೆಗೆ ಅನ್ನ ಸಂತರ್ಪಣೆ, ಹರಕೆಗಳು ಹಾಗೂ ಉರುಳು ಸೇವೆ, ಅಡಿಮ ನಡೆಯಲಿದೆ. 12 ಗಂಟೆಗೆ ಆದ್ಯಫಲ‌ ಲೇಲಂ, 12.30 ಗಂಟೆಗೆ ಪುಲ್ಲೋಟ್ ಶಿಲುಬೆ ಕಡೆಗೆ ಮೆರವಣಿಗೆ ತೆರಳಲಿದ್ದು, 1 ಗಂಟೆಗೆ ಆಶೀರ್ವಾದ ಹಾಗೂ ಹಬ್ಬದ ಪ್ರಸಾದ ವಿತರಣೆ ನಡೆದು‌ 1.30 ಗಂಟೆಗೆ ಧ್ವಜಾವರೋಹಣದೊಂದಿಗೆ ಕಾರ್ಯಕ್ರಮ ಸಮಾಪ್ತಗೊಳ್ಳಲಿದೆ.

error: Content is protected !!

Join the Group

Join WhatsApp Group