ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬ್ರಹ್ಮಗಂಟು’ ಧಾರಾವಾಹಿ ನಟಿ ಗೀತಾ ಭಾರತಿ ಭಟ್



(ನ್ಯೂಸ್ ಕಡಬ) newskadaba.com,  ಡಿ.15: ಬ್ರಹ್ಮಗಂಟು’ ಧಾರಾವಾಹಿ ನಟಿ ಗೀತಾ ಭಾರತಿ ಭಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ರಹ್ಮಾವರ ರಾಜಾರಾಮ್ ಭಟ್ ಎಂಬುವರ ಜೊತೆ ಗೀತಾ ಭಾರತಿಯವರ ವಿವಾಹ ನಡೆದಿದೆ.





ಕಿರುತೆರೆಯಲ್ಲಿ ಮೋಡಿ ಮಾಡಿರುವ ಕಲಾವಿದೆ ಗೀತಭಾರತಿ ಭಟ್ ಬಹುಮುಖ ಪ್ರತಿಭೆ. ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿಯೂ ಆಗಿದ್ದ ಗೀತಾ ಭಾರತಿ ಭಟ್ ಕನ್ನಡದ ಅನೇಕ ಧಾರಾವಾಹಿಯಲ್ಲಿ ನಟಿಸಿದ್ದು ಇದೀಗ ದಿಢೀರ್ ಮದುವೆಯಾಗಿದ್ದಾರೆ.






ಅಂದಹಾಗೆ ಗೀತಾ ಭಾರತಿ ಭಟ್ `ಅಂಬಿನಿಂಗ್ ವಯಸ್ಸಾಯ್ತೋ’ ಸಿನಿಮಾ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಪೋಷಕ ಪಾತ್ರದಲ್ಲಿ ಕಾಣಿಸ್ಕೊಂಡಿದ್ದರು. ಆದರೆ ಸಿನಿಮಾಗಳಿಗಿಂತ ಕಿರುತೆರೆಯಲ್ಲೇ ಗೀತಾ ಭಾರತಿ ಭಟ್ ಹೆಚ್ಚು ಜನಪ್ರಿಯರು. ಇದೀಗ ಗೀತಾ ಭಾರತಿ ಭಟ್ ಮದುವೆಗೆ ಅವರ ಸೀರಿಯಲ್ ಬಳಗದ ಆಪ್ತವರ್ಗ ಸಾಕ್ಷಿಯಾಗಿತ್ತು.

error: Content is protected !!
Scroll to Top