(ನ್ಯೂಸ್ ಕಡಬ) newskadaba.com, ಡಿ.01 : ʻ777 ಚಾರ್ಲಿʼನಂತಹ ಹಿಟ್ ಸಿನಿಮಾ ನೀಡಿದ ಡೈರೆಕ್ಟರ್ ಕಿರಣ್ ರಾಜ್ ದಾಂಪತ್ಯ ಬದುಕಿಗೆ ಕಾಲಿರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಪ್ರೀ-ವೆಡ್ಡಿಂಗ್ ಸೆಲೆಬ್ರೇಷನ್, ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ಸೇರಿದಂತೆ ಎಲ್ಲ ಕಾರ್ಯಮಗಳೂ ಅದ್ದೂರಿಯಾಗಿ ನೆರವೇರಿದ್ದು, ನವೆಂಬರ್ 30ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿರಿಸಿದೆ.
ಕಿರಣ್ ರಾಜ್ ಅವರ ಪತ್ನಿ ಅನಯಾ ವಸುಧಾ ಭರತನಾಟ್ಯ ಕಲಾವಿದೆಯಾಗಿದ್ದು, ಬಹು ಕಾಲದ ಪ್ರೀತಿಗೆ ಈ ಜೋಡಿ ಮದುವೆ ಮುದ್ರೆ ಒತ್ತಿದ್ದಾರೆ. ಕಿರಣ್ ರಾಜ್-ಅನಯಾ ವಸುಧಾ ಮದುವೆಯಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯರು, ಕುಟುಂಬಸ್ಥರು ಹಾಗೂ ಆಪ್ತರು ಭಾಗಿಯಾಗಿದ್ದರು…












