ಮೂಡಿಗೆರೆ: ಇನ್ನೋವಾ – ಲಾರಿ ಢಿಕ್ಕಿ ► ಮಂಗಳೂರಿನ ಇಬ್ಬರು ಮೃತ್ಯು



(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಮೇ.03. ಇನ್ನೋವಾ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮಂಗಳೂರಿನ ಮಹಿಳೆಯರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಅಪರಾಹ್ನ ಮೂಡಿಗೆರೆಯಲ್ಲಿ‌ ಸಂಭವಿಸಿದೆ.







ಮೃತರನ್ನು ಮಂಗಳೂರು ತಾಲೂಕಿನ ನಾಟೆಕಲ್ ನಿವಾಸಿಗಳಾದ ಅಸ್ಮಾ (50) ಹಾಗೂ ಸೌದಾ (48) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಆರು ಮಂದಿ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಟೆಕಲ್‌ ನಿವಾಸಿ ಇಸ್ಮಾಯಿಲ್ ಎಂಬವರು ತನ್ನ ಕುಟುಂಬ ಸಮೇತ ಬಾಡಿಗೆ ಇನ್ನೋವಾದಲ್ಲಿ ತೆರಳುತ್ತಿದ್ದಾಗ ಮೂಡಿಗೆರೆಯ ಕೃಷ್ಣಾಪುರ ಎಂಬಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಲಾರಿ ಕಾರಿನ ಎಡಬದಿಗೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.






error: Content is protected !!
Scroll to Top