ನವೋದ್ಯಮ ನೀತಿಯಿಂದ 5 ವರ್ಷಗಳಲ್ಲಿ 25 ಸಾವಿರ ಹೊಸ ಉದ್ಯೋಗಗಳು ಸೃಷ್ಟಿ : ಸಿಎಂ



(ನ್ಯೂಸ್‌ ಕಡಬ) newskadaba.com,  ನ.18 ಬೆಂಗಳೂರು: ಹೊಸದಾದ ನವೋದ್ಯಮ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ 25 ಸಾವಿರ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ 28 ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವೇಗವಾಗಿ ವಿಕಸನಗೊಳ್ಳುತ್ತಿರುವ ಜಾಗತಿಕ ತಂತ್ರಜ್ಞಾನ ಭೂದೃಶ್ಯದಲ್ಲಿ ಕರ್ನಾಟಕದ ಸ್ಪರ್ಧಾತಕತೆಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.





ಸುಮಾರು ಮೂರು ದಶಕಗಳಿಂದ ಬೆಂಗಳೂರು ಟೆಕ್‌ ಶೃಂಗಸಭೆಯು ಜಗತ್ತಿಗೆ ದಾರಿದೀಪವಾಗಿದೆ, ಆಲೋಚನೆಗಳು, ತಂತ್ರಜ್ಞಾನಗಳು ಒಮುಖವಾಗುವ ಸ್ಥಳವಾಗಿದೆ ಕೃತಕ ಬುದ್ಧಿಮತ್ತೆ, ಕ್ವಾಂಟಮ್‌‍, ಬಯೋಟೆಕ್‌, ಬಾಹ್ಯಾಕಾಶ ಮತ್ತು ಹಸಿರು ತಂತ್ರಜ್ಞಾನಗಳಿಂದ ಮುಂದಿನ ಡಿಜಿಟಲ್‌ ಕ್ರಾಂತಿ ನಡೆಯಲಿದೆ. ಬೆಂಗಳೂರು ನಾವೀನ್ಯತೆ, ಪ್ರತಿಭೆ, ಸಂಶೋಧನೆ ಮತ್ತು ತಾಂತ್ರಿಕ ನಾಯಕತ್ವದ ಜಾಗತಿಕ ಕೇಂದ್ರವಾಗಿದೆ.






ನೀತಿ ನಾವೀನ್ಯತೆಯಲ್ಲಿ ಕರ್ನಾಟಕ ಯಾವಾಗಲೂ ಭಾರತವನ್ನು ಮುನ್ನಡೆಸಿದೆ. ನಾವು 1997 ರಲ್ಲಿ ಭಾರತದ ಮೊದಲ ಐಟಿ ನೀತಿಯನ್ನು ರೂಪಿಸಿ ಮುಂಚೂಣಿಯಲ್ಲಿದ್ದೇವೆ. ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವನ್ನಾಗಿ ಮಾಡುವುದು, 2034 ರ ವೇಳೆಗೆ ರಾಷ್ಟ್ರೀಯ ಮಾರುಕಟ್ಟೆಯ ಶೇ.50 ಮತ್ತು ಜಾಗತಿಕವಾಗಿ ಶೇ.5 ರಷ್ಟು ಪಾಲು ಹೊಂದುವ ಉದ್ದೇಶವಿದೆ ಎಂದರು.

ಬೆಂಗಳೂರಿನಾಚೆ ಎರಡನೇ ಶ್ರೇಣಿಯ ನಗರಗಳಿಗೂ ಉದ್ಯಮಗಳನ್ನು ಕೊಂಡೊಯ್ಯಲಾಗುತ್ತಿದೆ. ಇದು ಕೇವಲ ಆರ್ಥಿಕ ತಂತ್ರವಲ್ಲ, ಸಮಾನ ಬೆಳವಣಿಗೆಯ ಬದ್ಧತೆ. ಪ್ರತಿಯೊಂದು ಜಿಲ್ಲೆಯು ಡಿಜಿಟಲ್‌ ಯುಗದ ಅವಕಾಶಗಳಿಗೆ ಪ್ರವೇಶ ಪಡೆಯಬೇಕು. ಪಾರದರ್ಶಕತೆ ಮತ್ತು ಸ್ಥಿರತೆ ನಮಲ್ಲಿದೆ. ಇದರಿಂದಾಗಿ ಕರ್ನಾಟಕವು ಹೂಡಿಕೆದಾರರಿಗೆ ಅತ್ಯಂತ ವಿಶ್ವಾಸಾರ್ಹ ತಾಣವಾಗಿದೆ ಎಂದರು..

 

error: Content is protected !!
Scroll to Top