(ನ್ಯೂಸ್ ಕಡಬ) newskadaba.com, ನ.17: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ನಟ ಅಜಿತ್ ಕುಮಾರ್ ಹಾಗೂ ಇನ್ನಿತರ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಸರಣಿ ಬೆದರಿಕೆಯ ಇಮೇಲ್ ದೂರವಾಣಿ ಕರೆಗಳು ಬಂದಿದ್ದು, ಈ ಕುರಿತು ರವಿವಾರ ಚೆನ್ನೈ ನಗರ ಪೊಲೀಸರು ತನಿಖೆ ಕೈಗೊಂಡರು.
ನಗರದಾದ್ಯಂತ ನಡೆದ ತೀವ್ರ ಶೋಧ ಕಾರ್ಯಾಚರಣೆಯ ನಂತರ, ಇವು ಹುಸಿ ಬಾಂಬ್ ಬೆದರಿಕೆಗಳು ಎಂದು ಬಾಂಬ್ ನಿಷ್ಕ್ರಿಯ ದಳ ಘೋಷಿಸಿದೆ














