(ನ್ಯೂಸ್ ಕಡಬ) newskadaba.com ಮಂಗಳೂರು, ಅ. 16. ಶಕ್ತಿ ವಸತಿ ಶಾಲೆಗೆ ಮೈಸೂರಿನ ದಿ|ರಾಡಿಸನ್ ಬ್ಲೂ ನಲ್ಲಿ ಎಜ್ಯುಕೇಶನ್ ನ್ಯೂಸ್ ನೆಟ್ ವರ್ಕ್ ಆಯೋಜಿಸಿದ ಕರ್ನಾಟಕ ಎಜ್ಯುಕೇಟರ್ಸ್ ಸಮ್ಮಿಟ್ 2025ನಲ್ಲಿ “ಡೈನಾಮಿಕ್ ಸ್ಕೂಲ್ ಅವಾರ್ಡ್-2025” ಎಂಬ ಪ್ರತಿಷ್ಠಿತ ಮಾನ್ಯತೆಯ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿನ ಶ್ರೇಷ್ಠತೆಗಾಗಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ಶ್ರೀಮತಿ. ಬಬಿತಾ ಸೂರಜ್ ಹಾಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೈಕ್, ಕಾರ್ಯದರ್ಶಿ ಶ್ರೀ ಸಂಜಿತ್ ನಾೈಕ್. ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ. ಹಾಗೂ ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹೆಚ್ ಅಭಿನಂದಿಸಿದರು.








