ಕಡಬ ಫೆಡರಲ್ ಬ್ಯಾಂಕ್ ಮ್ಯಾನೇಜರ್ ಗೆ ಪದೋನ್ನತಿ ಹೊಂದಿ ವರ್ಗಾವಣೆ ► ನೂತನ ಮ್ಯಾನೇಜರ್ ಆಗಿ ಪ್ರಮೋದ್ ಬಿ. ಪಾಟೀಲ್

(ನ್ಯೂಸ್ ಕಡಬ) newskadaba.com ಕಡಬ, ಎ.25. ಫೆಡರಲ್ ಬ್ಯಾಂಕ್ ಕಡಬ ಶಾಖೆಯಲ್ಲಿ ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ಜಾಯ್ಸನ್ ಡಿಸ್ನಿ ಡಿಸೋಜ ರವರು ಪದೋನ್ನತಿ ಹೊಂದಿ ಮಂಗಳೂರಿನ ಕಂಕನಾಡಿ ಶಾಖೆಗೆ ವರ್ಗಾವಣೆಗೊಂಡಿದ್ದಾರೆ‌.

2015 ರ ಜುಲೈ 18 ರಿಂದ ಕಡಬ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಎಪ್ರಿಲ್ 27 ರ ವರೆಗೆ ಕಡಬ ಶಾಖೆಯಲ್ಲಿಯೇ ಕರ್ತವ್ಯದಲ್ಲಿ ಮುಂದುವರಿಯಲಿದ್ದು, ನೂತನ ಮ್ಯಾನೇಜರ್ ಆಗಿ ಪ್ರಮೋದ್ ಬಿ. ಪಾಟೀಲ್ ಎಪ್ರಿಲ್ 30 ರಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ‌.

Scroll to Top