(ನ್ಯೂಸ್ ಕಡಬ) newskadaba.com, ಅ .13 ವಿಜಯಪುರ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ. ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ಯುವಕರಿಬ್ಬರ ಬರ್ಬರ ಹತ್ಯೆ ನಡೆದಿದೆ. ಹಳೇ ದ್ವೇಷ ಹಿನ್ನೆಲೆ ಕಲ್ಲಿನಿಂದ ಜಜ್ಜಿ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಾಗರ್ ಬೆಳುಂಡಗಿ (25), ಇಸಾಕ್ ಖುರೇಶಿ (24) ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಎರಡು ವರ್ಷದ ಹಿಂದೆ ಗ್ರಾಮದ ಈರಣ್ಣಗೌಡ ಮೇಲೆ ಕೊಲೆಯಾದ ಸಾಗರ್ ಹಾಗೂ ಇಸಾಕ್ ಹಲ್ಲೆ ನಡೆಸಿದ್ದರು. ಕೆಲ ದಿನಗಳ ಹಿಂದೆ ಚಿಕಿತ್ಸೆ ಫಲಿಸದೇ ಈರಣ್ಣಗೌಡ ಮೃತಪಟ್ಟಿದ್ದ. ಇದೇ ದ್ವೇಷಕ್ಕೆ ಕೊಲೆಗೈದಿರುವ ಸಂಶಯ ವ್ಯಕ್ತವಾಗಿದ್ದು, ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













