ಕಾಂತಾರ ಬ್ಲಾಕ್‌ಬಸ್ಟರ್ ಹಿಟ್ – ಮೊದಲ ವಾರಕ್ಕೆ 509 ಕೋಟಿ ಕಲೆಕ್ಷನ್




(ನ್ಯೂಸ್ಕಡಬ) newskadaba.com,  .10:  ಕಾಂತಾರ ಅಧ್ಯಾಯ 1 ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಕಾಂತಾರ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲಂಸ್ ಈಗ ಚಿತ್ರದ ಗಳಿಕೆ ಕುರಿತು ಅಧಿಕೃತ ಘೋಷಣೆ ಮಾಡಿದೆ. ಮೊದಲ ವಾರಕ್ಕೆ ಕಾಂತಾರ ಚಿತ್ರ 509.25 ಕೋಟಿ ಕಲೆಕ್ಷನ್ ಮಾಡಿದೆ.





`ಕಾಂತಾರ’ ಚಿತ್ರ ತೆರೆಕಂಡ ಬಳಿಕ ಬರುತ್ತಿದ್ದ ಅದ್ಭುತ ರೆಸ್ಪಾನ್ಸ್ ಗಮನಿಸಿದಾಗ ಮೊದಲ ವಾರದೊಳಗೆ ಕಾಂತಾರ ಚಿತ್ರ 500 ಕೋಟಿ ಗಡಿ ದಾಟುವ ಸುಳಿವು ನೀಡಿತ್ತು. ಇದೀಗ ನಿರೀಕ್ಷಿಸಿದಂತೆ ಕಾಂತಾರ ಸರಿಸುಮಾರು 510 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ.






ಅ.2 ರಂದು ಕಾಂತಾರ ಚಿತ್ರ ವಿಶ್ವದಾದ್ಯಂತ 7 ಭಾಷೆಗಳಲ್ಲಿ ತೆರೆಕಂಡಿತ್ತು. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಕಾಂತಾರಕ್ಕೆ ಅತ್ಯದ್ಭುತ ರೆಸ್ಪಾನ್ಸ್ ಸಿಗುತ್ತಿದ್ದು ವಿದೇಶದಲ್ಲೂ ಕಾಂತಾರ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಿಣಾಮ ಮೊದಲ ವಾರ 509 ಕೋಟಿ ಕಲೆಕ್ಷನ್ ಮಾಡಿದೆ.

ಕನ್ನಡದಲ್ಲಿ ಅತಿವೇಗದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಎರಡನೇ ಚಿತ್ರದ ಸ್ಥಾನದಲ್ಲಿದೆ ಕಾಂತಾರ. ಕೆಜಿಎಫ್ 2 ಚಿತ್ರ ಮೊದಲ ಸ್ಥಾನದಲ್ಲಿದೆ. ಕೆಜಿಎಫ್2 ಒಟ್ಟು 1215 ಕಲೆಕ್ಷನ್ ಮಾಡಿತ್ತು. ಇದೀಗ ಕಾಂತಾರ ಅದೇ ದಾರಿಯಲ್ಲಿದೆ. ಕಾಂತಾರ ಒಟಿಟಿ ಹಕ್ಕುಗಳನ್ನು ಅಮೇಜಾನ್ ಪ್ರೈಮ್‌ ಪಡೆದುಕೊಂಡಿದೆ.

error: Content is protected !!
Scroll to Top