(ನ್ಯೂಸ್ ಕಡಬ) newskadaba.com, ಅ.09 ದುಬೈ: ಎಸ್.ವಿ.ಎಸ್ ಹಳೆವಿದ್ಯಾರ್ಥಿ ಸಂಘ ಕಟಪಾಡಿ-ದುಬೈ ಇದರಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲಿ 55ಕ್ಕೂ ಅಧಿಕ ದಿನಗಳ ಭರ್ಜರಿ ಪ್ರದರ್ಶನ ಕಂಡು ಪ್ರೇಕ್ಷಕರಿಂದ ಮುಕ್ತಕಂಠದಿಂದ ಪ್ರಶಂಸಿಸಲ್ಪಟ್ಟ ‘ಸ್ಕೂಲ್ ಲೀಡರ್ ‘ಕನ್ನಡ ಸಿನೆಮಾ ಅ. 26ರಂದು ದುಬೈನಲ್ಲಿ ಪ್ರದರ್ಶನಗೊಳ್ಳಲಿದೆ.
ಪ್ರತಿಷ್ಠಿತ 4 ಅಂತರ್ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡ ಸ್ಕೂಲ್ ಲೀಡರ್ ಚಿತ್ರ ಈಗಾಗಲೇ ಆಸ್ಟ್ರೇಲಿಯಾದ ಮೆಲ್ಬೋರ್ನ್,ಸಿಡ್ನಿ,ಪರ್ತ್, ಒಮಾನಿನ ಮಸ್ಕತ್ ಹಾಗೂ ಬೆಹೆರಿನ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಇದೀಗ ಎಸ್.ವಿ.ಎಸ್.ಹಳೆವಿದ್ಯಾರ್ಥಿ ಸಂಘ ಕಟಪಾಡಿ ಮತ್ತು ದುಬೈ ಇವರ ಸಹಕಾರದಿಂದ ದುಬೈ ಯ ಸ್ಟಾರ್ ಗ್ಯಾಲರಿಯ ಸಿನೆಮಾ, ಗ್ರ್ಯಾಂಡ್ ಹಾಯತ್ ನಲ್ಲಿ ಅ. 26ರಂದು ಸಂಜೆ 3.30ಕ್ಕೆ ಪ್ರದರ್ಶನ ಕಾಣಲಿದೆ .
ರಾಜ್ಯಪ್ರಶಸ್ತಿ ವಿಜೇತ ರಜಾಕ್ ಪುತ್ತೂರು ನಿರ್ದೇಶನ, ಮೋಹನ್ ಪಡ್ರೆ ಯವರ ಛಾಯಾಗ್ರಹಣ, ಸಂಗೀತ ಜಯ ಕಾರ್ತಿ, ಅಕ್ಷತ್ ವಿಟ್ಲ ಸಹನಿರ್ದೇಶನದ ಸ್ಕೂಲ್ ಲೀಡರ್ ಕನ್ನಡ ಚಲನಚಿತ್ರ ದೇಶ ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಹೊಸ ಅಧ್ಯಾಯ ಸೃಷ್ಠಿಸಿದೆ.
.








