ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2 ಅತ್ಯಾಧುನಿಕ ಅಗ್ನಿಶಾಮಕ ವಾಹನಗಳು



(ನ್ಯೂಸ್ಕಡಬ) newskadaba.com,  .09 ಮಂಗಳೂರು : ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ಗೆ 2 ಅತ್ಯಾಧುನಿಕ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ಈ 2 ಅಗ್ನಿಶಾಮಕ ವಾಹನಗಳ ಸೇರ್ಪಡೆಯೊಂದಿಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕದ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸಿದಂತಾಗಿದೆ .





ಅಗ್ನಿ ಶಾಮಕ ವಾಹನಗಳನ್ನು ಆಸ್ಟ್ರಿಯಾದಿಂದ ಆಮದು ಮಾಡಿಕೊಳ್ಳಲಾಗಿದ್ದು, ರೋಸೆನ್‌ಬೌರ್ ಈ ವಾಹನಗಳನ್ನು ತಯಾರಿಸಿದೆ. ಪ್ರಪಂಚದಾದ್ಯಂತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂತಹ ಅಗ್ನಿಶಾಮಕ ವಾಹನಗಳು ಇವೆ.






ಈ ವಾಹನಗಳು 12,500 ಲೀಟರ್ ನೀರು ಮತ್ತು 1,500 ಲೀಟರ್ ಫೋಮ್ ಲೋಡ್ ಅನ್ನು ಹೊತ್ತೊಯ್ಯುತ್ತವೆ, 2009ರ ಹಿಂದಿನ ಸಿಎಫ್‌ಟಿ ಗಳಲ್ಲಿ 10,000 ಲೀಟರ್ ನೀರು ಮತ್ತು 1,300 ಲೀಟರ್ ಫೋಮ್ ಸಾಮರ್ಥ್ಯದ್ದು ಆಗಿತ್ತು.. ಈ ವಾಹನದಲ್ಲಿ ನಾಲ್ವರಿಗೆ ಆಸನಗಳ ವ್ಯವಸ್ಥೆ ಇರುತ್ತದೆ. ಗಂಟೆಗೆ 120 ಕಿಮೀ ಗರಿಷ್ಠ ವೇಗದಲ್ಲಿ ವಾಹನಗಳು ಸಂಚರಿಸುವ ಸಾಮರ್ಥ್ಯ ಹೊಂದಿವೆ.

error: Content is protected !!
Scroll to Top