(ನ್ಯೂಸ್ ಕಡಬ) newskadaba.com, ಅ.02 : ಬೆಂಗಳೂರಿನ ಕನಕಪುರ ಮುಖ್ಯರಸ್ತೆಯ ಯಲಚೇನಹಳ್ಳಿಯ ಒಂದು ಕಮರ್ಷಿಯಲ್ ಕಟ್ಟಡದಲ್ಲಿ ಆರು ಸಿಲಿಂಡರ್ ಲೀಕ್ ಆಗಿ, 19 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಕರಕಲಾದ ಘಟನೆ ನಡೆದಿದೆ.
ವಿಜಯದಶಮಿ ಹಬ್ಬದಂದು ಬೆಂಗಳೂರಿನ ಯಲಚೇನಹಳ್ಳಿಯಲ್ಲಿ ಬೆಂಕಿಯ ಕೆನ್ನಾಲೆಗೆ ಇವಿ ಸ್ಕೂಟರ್ ಸುಟ್ಟು ಭಸ್ಮವಾಗಿದೆ. ಯಲಚೇನಗಹಳ್ಳಿ ಕಮರ್ಷಿಯಲ್ ಬಿಲ್ಡಿಂಗ್‌ನಲ್ಲಿ ಘಟನೆ ನಡೆದಿದೆ. ಮೊದಲು ಇವಿ ವಾಹನದ ಪ್ಲಗ್ ಪಾಯಿಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಕಮರ್ಷಿಯಲ್ ಬಿಲ್ಡಿಂಗ್‌ನ ಆರು ಸಿಲಿಂಡರ್ ಲೀಕ್ ಆಗಿ ಸ್ಫೋಟಗೊಂಡಿದೆ. ಒಂದು ಸ್ಕೂಟರ್‌ನಲ್ಲಿ ಸಮಸ್ಯೆ ಕಂಡುಬಂದ ಪರಿಣಾಮ ಎಲ್ಲ ಗಾಡಿಗಳಿಗೂ ಬೆಂಕಿ ಪಸರಿಸಿ ಅವಘಡ ಸಂಭವಿಸಿದೆ.ಸ್ಫೋಟದ ತೀವ್ರತೆಗೆ ಸಿಲಿಂಡರ್‌ಗಳು ಪೀಸ್ ಪೀಸ್ ಆಗಿದೆ. ಇವಿ ಸ್ಕೂಟರ್‌ಗಳು ಸುಟ್ಟು ಕರಕಲಾಗಿವೆ.
ಘಟನೆಗೆ ಕಾರಣ
ಗುರುವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಚಾರ್ಜ್ ಆಗುತ್ತಿದ್ದ 19 EV ಬೈಕ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. EV ಬೈಕ್ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಒಂದು ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ಬೆಂಕಿ ಹತ್ತಿರದ ಬೈಕ್‌ಗಳಿಗೆ ಹರಡಿದೆ. ಬೇಸ್‌ಮೆಂಟ್‌ನಲ್ಲಿ ಇದ್ದ ಗ್ಯಾಸ್ ಸಿಲಿಂಡರ್‌ಗಳಿಂದ ಗ್ಯಾಸ್ ಸೋರಿಕೆಯಾಗಿ ಒಂದು ಸಿಲಿಂಡರ್ ಬ್ಲಾಸ್ಟ್ ಆಗಿದೆ. ಇದು ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿದೆ. ಸ್ಥಳೀಯರು ಮತ್ತು ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡರು. ಅಗ್ನಿಶಾಮಕ ಇಲಾಖೆಯ 2 ಫೈರ್ ಎಂಜಿನ್‌ಗಳು ಬೆಂಕಿಯನ್ನು ನಿಯಂತ್ರಿಸಿದವು. ಯಾವುದೇ ಜೀವಹಾನಿ ಆಗಿಲ್ಲ, ಆದರೆ ಇತರ ವಾಹನಗಳಿಗೆ ಹಾನಿಯಾಗಿದೆ.








