(ನ್ಯೂಸ್ ಕಡಬ) newskadaba.com ಸೆ. 01. ಕ್ರೋಕ್ಸ್ ಚಪ್ಪಲಿಯಲ್ಲಿ ಅಡಗಿದ್ದ ವಿಷಕಾರಿ ಹಾವು ಕಚ್ಚಿ ಟೆಕ್ಕಿಯೊಬ್ಬರು ಮೃತಪಟ್ಟ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ನಡೆದಿದೆ.
ಮಂಜು ಪ್ರಕಾಶ್ (41) ಮೃತ ದುರ್ವೈವಿ. ಅಪಘಾತದಲ್ಲಿ ಕಾಲಿನ ಸ್ಪರ್ಶ ಶಕ್ತಿ ಕಳೆದುಕೊಂಡಿದ್ದರಿಂದ ಹಾವು ಕಚ್ಚಿದ್ದನ್ನು ಗಮನಿಸಲಾಗದೆ ಮಂಜು ಪ್ರಕಾಶ್ ಅವರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.












