(ನ್ಯೂಸ್ ಕಡಬ) newskadaba.com, ಆಗಸ್ಟ್ 30 ವಿಶಾಖಪಟ್ಟಣಂ : ಕೇವಲ 14 ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿ ಸ್ಫೋಟಕ ಶತಕ ಬಾರಿಸುವ ಮೂಲಕ ವಿಶ್ವದಾದ್ಯಂತ ಗಮನ ಸೆಳೆದಿದ್ದ ವೈಭವ್ ಸೂರ್ಯವಂಶಿ ಇದೀಗ ಕಬಡ್ಡಿ ಅಂಗಳದಲ್ಲೂ ಕಾಣಿಸಿಕೊಂಡಿದ್ದಾರೆ.
ಪ್ರೊ ಕಬಡ್ಡಿ ಲೀಗ್‌ನ 12 ನೇ ಸೀಸನ್ ಆಗಸ್ಟ್ 29 ರ ಶುಕ್ರವಾರದಿಂದ ಪ್ರಾರಂಭವಾಗಿದೆ. ಅದರ ಉದ್ಘಾಟನೆಗೆ ವೈಭವ್ ಸೂರ್ಯವಂಶಿ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ವೈಭವ್ ಅವರನ್ನು ನೋಡಿದ ತಕ್ಷಣ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಇದೇ ವೇಳೆ ಕಬಡ್ಡಿ ಆಟಗಾರರೊಂದಿಗೆ ಕ್ರಿಕೆಟ್ ಆಡಿದ ವೈಭವ್ ಒಂದೊಂದಾಗಿ 3 ಸಿಕ್ಸರ್‌ಗಳನ್ನು ಬಾರಿಸಿದರು.
ಇಲ್ಲಿಯವರೆಗೂ ನಡೆದಿರುವ ಪ್ರೋ ಕಬಡ್ಡಿ ಲೀಗ್ ನ ಉದ್ಘಾಟನಾ ಸಮಾರಂಭದಲ್ಲಿ ಬ್ಯಾಡ್ಮಿಂಟನ್ ಪಟು ಪುಲ್ಲೇಲ ಗೋಪಿಚಂದ್, ಮಾಜಿ ಭಾರತ ಹಾಕಿ ನಾಯಕ ಧನರಾಜ್ ಪಿಳ್ಳೆ, ಕಬಡ್ಡಿ ಸೂಪರ್‌ಸ್ಟಾರ್ ಪರ್ದೀಪ್ ನರ್ವಾಲ್ ಅವರಂತಹ ಆಟಗಾರರು ಪಾಲ್ಗೊಂಡಿದ್ದರು. ಇದೀಗ ವೈಭವ ಸೂರ್ಯವಂಶಿ ಕೂಡಾ ಅದರಲ್ಲಿ ಸ್ಥಾನ ಪಡೆದರು.











