ಟೋಕಿಯೋಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ



(ನ್ಯೂಸ್‌ ಕಡಬ) newskadaba.com, ಆ.29: ಭಾರತ ಹಾಗೂ ಜಪಾನ್ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೋಗೆ ತೆರಳಿದ್ದಾರೆ.





ಪ್ರಧಾನಿ ಮೋದಿ ಅವರನ್ನು ನೋಡಲು ಭಾರತೀಯ ವಲಸಿಗರು ಕಾತುರದಿಂದ ಕಾದು ಕುಳಿತಿದ್ದರು. ಇಂದು ಪ್ರಧಾನಿ ಮೋದಿ ಅವರು ಜಪಾನ್ಪ್ರಧಾನಿ ಶಿಗೇರು ಇಶಿಬಾ ಅವರನ್ನು ಭೇಟಿಯಾಗಲಿದ್ದಾರೆ.






2 ದಿನಗಳ ದೇಶ ಭೇಟಿಯ ವೇಳೆ ಪ್ರಧಾನಿಯವರು ಟೋಕಿಯೋದಲ್ಲಿ ಜಪಾನ್ ಕೈಗಾರಿಕೋದ್ಯಮಿಗಳು ಹಾಗೂ ರಾಜಕೀಯ ನಾಯಕರನ್ನು ಕೂಡ ಭೇಟಿ ಮಾಡಲಿದ್ದಾರೆ. ಮೋದಿಯವರ ಎರಡು ದಿನಗಳ ಭೇಟಿಯ ವೇಳೆ ಜಪಾನ್ಸರ್ಕಾರ ಭಾರತಕ್ಕೆ 10 ಟ್ರಿಲಿಯನ್ಯೆನ್ಹೂಡಿಕೆಯ ಗುರಿಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಜಪಾನ್ಭೇಟಿ ಮುಗಿಸಿದ ಬಳಿಕ, ಪ್ರಧಾನಿ ಮೋದಿ ಅವರು .31 ರಿಂದ ಸೆ.1ರವರೆಗೆ ಚೀನಾದಲ್ಲಿರಲಿದ್ದಾರೆ. ಅಲ್ಲಿ ಪ್ರಧಾನಿಯವರು ಟಿಯಾಂಜಿನ್ನಲ್ಲಿ ನಡೆಯುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

error: Content is protected !!
Scroll to Top