ಗಣೇಶ ಹಬ್ಬಕ್ಕೆ ತುಳು ಸಿನಿಮಾ ‘ಪಿಚ್ಚರ್’ ಟೈಟಲ್ ಪೋಸ್ಟರ್ ರಿಲೀಸ್



(ನ್ಯೂಸ್‌ ಕಡಬ) newskadaba.com, ಆ.28: ಗಣೇಶ ಹಬ್ಬದ ಸಂಭ್ರಮದಲ್ಲಿ ಗೋಲ್ಡನ್ ಮೂವೀಸ್ ಕಡೆಯಿಂದ ಬಿಗ್‌ ಅಪ್‌ಡೇಟ್‌ ಲಭಿಸಿದೆ.





 ತುಳು ಮೂವಿ ನಿರ್ಮಾಣಕ್ಕೆ ಸಜ್ಜಾಗಿರುವ ಗೋಲ್ಡನ್‌ ಮೂವೀಸ್‌ ತಂಡ ಇದೀಗ ಗಣೇಶ ಚತುರ್ಥಿಯ ದಿನದಂದು ಟೈಟಲ್‌ ಪೋಸ್ಟರ್‌ ಹಂಚಿಕೊಂಡು ಸಂಭ್ರಮಿಸಿದೆ. ಪ್ರೊ






ಡಕ್ಶನ್‌ ನಂಬರ್‌ ವನ್‌ ಎಂದು ತಾತ್ಕಾಲಿಕ ಶೀರ್ಷಿಕೆ ನೀಡಿದ್ದ ಚಿತ್ರಕ್ಕೆ ಪಿಚ್ಚರ್‌ ಎಂಬ ಶೀರ್ಷಿಕೆ ನೀಡಿ ಸಮಾಜಿಕ ಜಾಲತಾಣದಲ್ಲಿ ಟೈಟಲ್‌ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗೋಲ್ಡನ್ ಮೂವೀಸ್ ಇದೀಗ ತುಳು ಸಿನಿಮಾ ನಿರ್ಮಾಣಕ್ಕಿಳಿದಿದೆ. “ಗೋಲ್ಡನ್ ಮೂವೀಸ್” ಸಂಸ್ಥೆಯಡಿ ಶಿಲ್ಪಾಗಣೇಶ್‌ ನಿರ್ಮಾಣದ, ಇನ್ನು ಸಂದೀಪ್ ಬೆದ್ರ ಆ್ಯಕ್ಷನ್​ ಕಟ್​​ ಹೇಳಲಿರುವ ಸಿನಿಮಾದ ಮುಹೂರ್ತ ಸಮಾರಂಭ ಕುದ್ರೋಳಿ ದೇವಸ್ಥಾನದಲ್ಲಿ ನಡೆದಿತ್ತು. ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಪಾಲ್ಗೊಂಡು ಸ್ಟಾರ್ ಮೆರುಗು ನೀಡಿದ್ದರು. ಇದೀಗ ಅಧಿಕೃತವಾಗಿ ಪಿಕ್ಚರ್‌ ಎಂಬ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ.

error: Content is protected !!
Scroll to Top