(ನ್ಯೂಸ್ ಕಡಬ) newskadaba.com, ಆ.28: ಬೆಂಗಳೂರು: ಕೌಶಲ್ಯ ಮತ್ತು ಚಾಂಪಿಯನ್ಗಳ ಚೈತನ್ಯದ ಪ್ರದರ್ಶನದೊಂದಿಗೆ ಕರ್ನಾಟಕ ಮಹಿಳಾ ಲೀಗ್ (KWL) 2025–26 ಮುಕ್ತಾಯವಾಯಿತು. ಬಿ ಎಲ್ ಕಶ್ಯಪ್ & ಸನ್ಸ್ ಲಿಮಿಟೆಡ್ (BLK) ಶೀರ್ಷಿಕೆ ಪ್ರಾಯೋಜಕ ರಾಗಿದ್ದರು.
ಪ್ರಸಕ್ತ ವರ್ಷವು ಕರ್ನಾಟಕದಲ್ಲಿ ಮಹಿಳಾ ಫುಟ್ಬಾಲ್ನ ಆರಂಭಕ್ಕೆ ನಾಂದಿ ಹಾಡಿದ್ದಲ್ಲದೇ ಹೊಸ ಪೀಳಿಗೆಯ ಕ್ರೀಡಾಪಟುಗಳು ತಮ್ಮ ಕ್ರೀಡಾ ಕನಸು ಗಳನ್ನು ಮುಂದುವರಿಸಲು ಸ್ಫೂರ್ತಿ ನೀಡಿತು.
ಈ ಹಿಂದೆ IWL ವಿಜೇತರಾಗಿದ್ದ ಕಿಕ್ಸ್ಟಾರ್ಟ್ FC 7 ನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು, ಮಿಸಾಕಾ ಯುನೈಟೆಡ್ FC ರನ್ನರ್-ಅಪ್ ಆಗಿ ಸ್ಥಾನ ಪಡೆಯಿತು ಮತ್ತು B L ಕಶ್ಯಪ್ ಪ್ರಾಯೋಜಕ ರಾಗಿ IWL2 ಅನ್ನು ಆಡಿದ ಮತ್ತು ಆಯೋಜಿಸಿದ್ದ ರೂಟ್ಸ್ FC ಫೇರ್ ಪ್ಲೇ ಪ್ರಶಸ್ತಿ ಗಳಿಸಿತು.











