(ನ್ಯೂಸ್ ಕಡಬ) newskadaba.com, ಆ.22: ಅನೇಕ ಕಾರಣಗಳಿಂದ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಈ ಗಂಟಲು ನೋವಿನಿಂದ ಧ್ವನಿಯೇ ಹೊರಬರುವುದಿಲ್ಲ. ಅಲ್ಲದೇ, ಮಾತನಾಡಲು ತೊಂದರೆಯಾಗುತ್ತದೆ. ಏನನ್ನಾದರೂ ನುಂಗುವುದು ಕಷ್ಟ ಹಾಗೂ ನೋವಾಗುತ್ತದೆ. ಈ ಸಮಸ್ಯೆಯಿಂದ ಹೇಗೆ ಮುಕ್ತಿ ಪಡೆಯಬಹುದು ಎನ್ನುವುದನ್ನು ತಿಳಿಯಿರಿ.
ಗಂಟಲು ನೋವು ಕಂಡುಬಂದರೆ, ಉಗುರು ಬೆಚ್ಚಗಿನ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಗಂಟಲು ಊತ ಹಾಗೂ ನೋವು ವಾಸಿಯಾಗುತ್ತದೆ.
ಗಂಟಲು ನೋವು ಇದ್ದರೆ ರಾತ್ರಿ ವೇಳೆ ಅರಶಿನದೊಂದಿಗೆ ಬೆಚ್ಚಗಿನ ಹಾಲು ಕುಡಿಯಬಹುದು. ಹೀಗೆ ಮಾಡುವುದರಿಂದ ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.
ತುಳಸಿ ಹಾಗೂ ಲೈಕೋರೈಸ್ ಗಂಟಲು ನೋವಿಗೆ ಪರಿಹಾರ ನೀಡುತ್ತದೆ. ಈ ಎರಡರ ಕಷಾಯವನ್ನು ತಯಾರಿಸಿ ಕುಡಿಯಬಹುದು. ಇದು ಗಂಟಲು ನೋವಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ.












