(ನ್ಯೂಸ್ ಕಡಬ) newskadaba.com, ಆ.22: ಜನಪ್ರಿಯ ನಟ– ಹಾಸ್ಯನಟ ಜಸ್ವಿಂದರ್ ಭಲ್ಲಾ(65) ಇಂದು ಬೆಳಗ್ಗೆ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವರದಿಗಳ ಪ್ರಕಾರ, ಭಲ್ಲಾ ಅವರನ್ನು ಮೆದುಳು ಪಾರ್ಶ್ವವಾಯುವಿಗೆ ಒಳಗಾದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಆ.23ರಂದು ಮಧ್ಯಾಹ್ನ 12 ಗಂಟೆಗೆ ಮೊಹಾಲಿಯ ಬಲೋಂಗಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಸ್ವಿಂದರ್ ಭಲ್ಲಾ ಅವರು ತಮ್ಮ ವಿಶಿಷ್ಟ ಹಾಸ್ಯ ಶೈಲಿ ಹಾಗೂ ಸ್ಮರಣೀಯ ಪಾತ್ರಗಳಿಂ ಪಂಜಾಬಿ ಮನರಂಜನಾ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಇವರು ಗಡ್ಡಿ ಚಲ್ತಿ ಹೈ ಛಲಾಂಗ್ ಮಾರ್ ಕೆ, ಕ್ಯಾರಿ ಆನ್ ಜಟ್, ಜಿಂದ್ ಜಾನ್, ಬ್ಯಾಂಡ್ ಬಾಜೆ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದರು.















