ಕಾಂಗ್ರೆಸ್‌ ಶಾಸಕ ಕೆ.ಸಿ ವೀರೇಂದ್ರ ಮನೆ ಮೇಲೆ ಇಡಿ ದಾಳಿ



(ನ್ಯೂಸ್‌ ಕಡಬ) newskadaba.com, ಆ.22: ಕಾಂಗ್ರೆಸ್ಶಾಸಕ ಕೆ.ಸಿ ವೀರೇಂದ್ರ ಅವರ ನಿವಾಸದ ಮೇಲೆ ಬೆಳ್ಳಂಬೆಳ್ಳಗ್ಗೆ ಜಾರಿ ನಿರ್ದೇಶನಾಲಯ(.ಡಿ) ದಾಳಿ ಮಾಡಿದೆ.







ಕೆ.ಸಿ ವೀರೇಂದ್ರ ಹಾಗೂ ಅವರ ಸಹೋದರರ, ಚಳ್ಳಕೆರೆ ಪಟ್ಟಣದಲ್ಲಿರುವ 4 ನಿವಾಸಗಳ ಮೇಲೆ .ಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೆ.ಸಿ. ನಾಗರಾಜ, ಕೆ.ಸಿ.ತಿಪ್ಪೇಸ್ವಾಮಿ, ನಿವಾಸದಲ್ಲಿ ಇಡಿಯಿಂದ ಪರಿಶೀಲನೆ ನಡೆದಿದೆ. 20ಕ್ಕೂ ಅಧಿಕ ವಾಹನಗಳಲ್ಲಿ ಬಂದಿರುವ 40ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಮನೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.






ಕೆ.ಸಿ.ವೀರೇಂದ್ರ ಒಡೆತನದ ಕಂಪೆನಿಗಳಿಂದ ಗೇಮಿಂಗ್ಆಪ್ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿತ್ತು. ವೀರೇಂದ್ರ ಅವರಿಗೆ ಸೇರಿದ ರತ್ನ ಗೋಲ್ಡ್‌, ರತ್ನ ಮಲ್ಟಿ ಸೋರ್ಸ್‌, ಪಪ್ಪಿ ಟೆಕ್ನಾಲಜಿ, ರತ್ನ ಗೇಮಿಂಗ್ಸೊಲ್ಯೂಷನ್ಸ್ಸೇರಿ ಇತರೆ ಕಂಪೆನಿಗಳಿಂದ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಇಡಿ ದಾಳಿ ನಡೆದಿದೆ. ಒಟ್ಟಾರೆಯಾಗಿ ಚಳ್ಳಕೆರೆ, ಬೆಂಗಳೂರು ಹಾಗೂ ಗೋವಾ ಸೇರಿದಂತೆ 17 ಕಡೆ ಇಡಿ ದಾಳಿ ನಡೆದಿದೆ.

error: Content is protected !!
Scroll to Top