(ನ್ಯೂಸ್ ಕಡಬ) newskadaba.com ಆ. 20. ಕಝಕಿಸ್ತಾನದ ಶಿಮ್ಕೆಂಟ್ ನಲ್ಲಿ ಮಂಗಳವಾರದಂದು ನಡೆದ ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್ಸ್ ನ ಜೂನಿಯರ್ ಮಹಿಳೆಯರ ಸ್ಪರ್ಧೆಯಲ್ಲಿ ರಶ್ಮಿಕಾ ಸಹಗಲ್ ಚಿನ್ನದ ಪದಕ ಜಯಿಸಿದರೆ, 10 ಮೀ. ಏರ್ ಪಿಸ್ತೂಲ್ ಮಹಿಳೆಯರ ಸ್ಪರ್ಧೆಯಲ್ಲಿ ಭಾರತೀಯ ಶೂಟರ್ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ.
8 ಆಟಗಾರ್ತಿಯರಿದ್ದ ಫೈನಲ್‌ನಲ್ಲಿ ಮನು ಬಾಕರ್ 219.7 ಅಂಕ ಗಳಿಸಿ 3ನೇ ಸ್ಥಾನ ಪಡೆದರೆ, ದಕ್ಷಿಣ ಕೊರಿಯಾದ ಜಿನ್ ಯಾಂಗ್(241.6)ಹಾಗೂ ಚೀನಾದ ಕ್ವಿಯಾಂಕ್ ಮಾ(243.2)ಮೊದಲೆರಡು ಸ್ಥಾನ ಪಡೆದಿದ್ದಾರೆ.
ರಶ್ಮಿಕಾ ಅವರು ವಂಶಿಕಾ ಚೌಧರಿ ಹಾಗೂ ಮೋಹಿನಿ ಸಿಂಗ್ ಜೊತೆಗೂಡಿ 1,720 ಅಂಕ ಕಲೆ ಹಾಕಿ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ದಕ್ಷಿಣ ಕೊರಿಯಾ(1,698)ಹಾಗೂ ಕಝಕ್‌ಸ್ತಾನ(1662) ಉಳಿದೆರಡು ಸ್ಥಾನ ಪಡೆದಿವೆ.














