ಕಡಬ ಪಟ್ಟಣ ಪಂಚಾಯತ್ ಚುನಾವಣೆ 13 ಕ್ಷೇತ್ರಗಳಲ್ಲಿ 8 ಕಾಂಗ್ರೆಸ್, 5 ಬಿಜೆಪಿ ತೆಕ್ಕೆಗೆ



(ನ್ಯೂಸ್ ಕಡಬ) newskadaba.com ಕಡಬ, ಆ.20. ಇದೇ ಮೊದಲ ಬಾರಿಗೆ ನಡೆದ ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಕೆಲವು‌ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಜಯಗಳಿಸಿದರೆ ಕೆಲವು ವಾರ್ಡ್ ಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.







ತೀವ್ರ ಕುತೂಹಲಕ್ಕೆ‌ ಕಾರಣವಾಗಿದ್ದ ಕಳಾರ ವಾರ್ಡ್ ನಲ್ಲಿ ಕಾಂಗ್ರೆಸ್ ನ ತಮನ್ನಾ ಜಬೀನ್ ಜಯಗಳಿಸಿದರೆ, 8ನೇ ಪಿಜಕ್ಕಳ ವಾರ್ಡ್ ನಲ್ಲಿ ದಯಾನಂದ ಗೌಡ ಪಿ. ರವರು ಕಾಂಗ್ರೆಸ್ ನ ಅಶ್ರಫ್ ಶೇಡಿಗುಂಡಿಯವರ ವಿರುದ್ಧ ಜಯಗಳಿಸಿದ್ದಾರೆ. ಕೋಡಿಬೈಲು ವಾರ್ಡ್ ಬಿಜೆಪಿ ಅಭ್ಯರ್ಥಿ ಕುಸುಮಾ, ಮೂರಾಜೆ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ, ಪನ್ಯ ವಾರ್ಡ್ ಕಾಂಗ್ರೆಸ್ ಮಹಮ್ಮದ್ ಫ಼ೈಜಲ್, ಕೋಡಿಂಬಾಳ ವಾರ್ಡ್ ಬಿಜೆಪಿ ಅಕ್ಷತಾ ಮಣಿಮುಂಡ ಗೆಲುವು ಸಾಧಿಸಿದ್ದಾರೆ. ಬೆದ್ರಾಜೆ ವಾರ್ಡ್ ಕಾಂಗ್ರೆಸ್ ಸಿ.ಜೆ ಸೈಮನ್, ದೊಡ್ಡಕೊಪ್ಪ ವಾರ್ಡ್ ಬಿಜೆಪಿ ಗುಣವತಿ ಗೆಲುವು ಸಾಧಿಸಿದ್ದು, ಮಾಲೇಶ್ವರ ವಾರ್ಡ್ ಕಾಂಗ್ರೆಸ್ ಮಹಮ್ಮದ್ ಹನೀಫ್, ಮಜ್ಜಾರು ವಾರ್ಡ್ ಬಿಜೆಪಿ ಮೋಹನ್, ಕಡಬ ವಾರ್ಡ್ ಕಾಂಗ್ರೆಸ್ ನೀಲಾವತಿ ಶಿವರಾಮ, ಪುಳಿಕುಕ್ಕು ವಾರ್ಡ್ ಕಾಂಗ್ರೆಸ್ ಕೃಷ್ಣಪ್ಪ, ಪಣೆಮಜಲ್ ಕಾಂಗ್ರೆಸ್ ಅಭ್ಯರ್ಥಿ ರೋಹಿತ್ ಗೌಡ ಗೆಲುವು ಸಾಧಿಸಿದ್ದು, ಒಟ್ಟು 13 ಸ್ಥಾನಗಳ ಪೈಕಿ ಕಾಂಗ್ರೆಸ್ 8 ಸೀಟ್ ತನ್ನದಾಗಿಸಿದ್ದು, ಬಿಜೆಪಿ 5 ಸೀಟ್ ಗೆದ್ದುಕೊಳ್ಳುವ ಮೂಲಕ ಕಡಬ ಪಟ್ಟಣ ಪಂಚಾಯತ್ ಕಾಂಗ್ರೆಸ್ ವಶಕ್ಕೆ ಬಂದಿದೆ.






error: Content is protected !!
Scroll to Top