ಎಸ್ ಡಿ ಪಿ ಐ ಸುಳ್ಯ ಬ್ಲಾಕ್ ಮಾಸಿಕ ಸಭೆ

(ನ್ಯೂಸ್‌ ಕಡಬ) newskadaba.com ಆ. 19  ಸುಳ್ಯ, ಆ. 19. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ಬ್ಲಾಕ್ ಸಮಿತಿಯ ಮಾಸಿಕ ಸಭೆಯು ಆಗಸ್ಟ್ 18ರಂದು ಪಕ್ಷದ ಕಚೇರಿಯಲ್ಲಿ ಸಿದ್ದೀಕ್ ಸಿ ಎ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರ ವ್ಯಾಪ್ತಿಯ ಹಲವು ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿದ್ದು ಅದರ ಬಗ್ಗೆ ಧೀರ್ಘ ಚರ್ಚೆ ನಡೆಯಿತು. ಮುಂದಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಪಕ್ಷದ ಭಾಗವಹಿಸುವಿಕೆಯ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷರಾದ ಸಲೀಂ ಗೂನಡ್ಕ ರವರು ಉಪಸ್ಥಿತರಿದ್ದರು. ಸಿದ್ದೀಕ್ ಸಿ ಎ ಪ್ರಾಸ್ತಾವಿಕ ಮಾತನಾಡಿ, ಕಾರ್ಯದರ್ಶಿ ಸುಹೈಲ್ ವಂದನೆಗೈದರು.

Scroll to Top