ಇದು ಮೋದಿ ಕಾಲ, ಎಲ್ಲ ವೇಗವಾಗಿ ನಡೆಯುತ್ತೆ: ತೇಜಸ್ವಿ ಸೂರ್ಯ



(ನ್ಯೂಸ್‌ ಕಡಬ) newskadaba.com, ಆ.06:‌ ನಾನು ಹೊಸ ತಲೆಮಾರಿನವನು, ಹಾಗಾಗಿ ಕೆಲಸ ಬೇಗ ಆಗಬೇಕು ಎನ್ನುವವನು. ಇದು ಮೋದಿ ಕಾಲ, ಎಲ್ಲವೂ ವೇಗವಾಗಿ ನಡೆಯುತ್ತದೆ. ಆದರೆ, ವಿಳಂಬ ಮಾಡುವುದೇ ಕಾಂಗ್ರೆಸ್ಸಿಗರ ಕಥೆ ಎಂದು ಸಂಸದ ತೇಜಸ್ವಿ ಸೂರ್ಯ ಡಿಸಿಎಂ ಡಿಕೆ ಶಿವಕುಮಾರ್ಗೆ ಟಾಂಗ್ನೀಡಿದ್ದಾರೆ.







ದೆಹಲಿಯಲ್ಲಿ ಮಾತನಾಡಿದ ಅವರು, ಹಳದಿ ಲೈನ್ಮೆಟ್ರೋ ಏಕೆ ಆತುರದಲ್ಲಿ ಮಾಡಿದರು ಎಂದು ಬೈಯುತ್ತಿರುವವರು, ಇವರು ಸಮಸ್ಯೆಗಳು ಇದ್ದಾಗ ಎಲ್ಲಿಗೆ ಹೋಗಿದ್ದರು. 4 ವರ್ಷ ಮೆಟ್ರೋಗೆ ಎಂಡಿ ಇರಲಿಲ್ಲ. ಬಿಎಂಆರ್ಸಿಎಲ್ಎರಡು ವರ್ಷದಲ್ಲಿ ಅರ್ಧ ಡಜೆನ್ಸಮಯ ಫಿಕ್ಸ್ಮಾಡಿ ಮುಂದೂಡಿದೆ ಎಂದಿದ್ದಾರೆ.






ಆಲಮಟ್ಟಿಗೆ ಶಾಸ್ತ್ರೀಯವರು ಅಡಿಗಲ್ಲು ಹಾಕಿ, ಮನಮೋಹನ್ಸಿಂಗ್ಉದ್ಘಾಟನೆ ಮಾಡಿದರು. ವೇಗದಲ್ಲಿ ಕಾಂಗ್ರೆಸ್ಸಿಗರು ದೇಶ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ತುರ್ತು ಅಗತ್ಯವಿಲ್ಲ. ಜಿರೋ ಟ್ರಾಫಿಕ್ನಲ್ಲಿ ಓಡಾಡುವವರಿಗೆ ಮೆಟ್ರೋದ ಅವಶ್ಯಕತೆಯ ಬಗ್ಗೆ ಏನು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top