ಜಾಮೀನು ರದ್ದಾಗದಂತೆ ಸುಪ್ರೀಂಗೆ ಪವಿತ್ರಾ ಗೌಡ ಮನವಿ



(ನ್ಯೂಸ್‌ ಕಡಬ) newskadaba.com, ಆ.06:‌ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ತೂಗುದೀಪ ಹಾಗೂ ಪವಿತ್ರಾ ಗೌಡ ಸೇರಿದಂತೆ ಕೆಲವು ಆರೋಪಿಗಳಿಗೆ ಜಾಮೀನು ರದ್ದಾಗುವ ಭೀತಿ ಎದುರಾಗಿದೆ.







ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಇದೀಗ ಆರೋಪಿಗಳು ತಮ್ಮ ಜಾಮೀನು ರದ್ದು ಮಾಡಬೇಡಿ ಎಂದು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ದರ್ಶನ್ಹಾಗೂ ಪವಿತ್ರಾ ಗೌಡ ಅವರ ಪರ ವಕೀಲರು ಆರೋಪಿಗಳ ಜಾಮೀನು ರದ್ದಾಗಬಾರದು ಎಂಬ ಕಾರಣಗಳನ್ನು ಲಿಖಿತ ರೂಪದಲ್ಲಿ ಸುಪ್ರೀಂಕೋರ್ಟ್ಗೆ ನೀಡಿದ್ದಾರೆ.






ರೇಣುಕಾಸ್ವಾಮಿ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ರೇಣುಕಾಸ್ವಾಮಿ ಮೃತದೇಹದ ಮೇಲಿನ ಗಾಯಗಳು ಪವಿತ್ರಾ ಗೌಡರಿಂದ ಆಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ನಾನು ಒಬ್ಬಂಟಿ ಪೋಷಕಳಾಗಿದ್ದು, ನನಗೆ 10ನೇ ತರಗತಿಯಲ್ಲಿ ಓದುವ ಮಗಳಿದ್ದಾಳೆ. ವಯಸ್ಸಾದ ಪೋಷಕರಿದ್ದು, ಅವರನ್ನು ನೋಡಿಕೊಳ್ಳಬೇಕಿದೆ, ನನಗೆ ಯಾವುದೇ ರೀತಿಯಾದ ಕ್ರಿಮಿನಲ್ಹಿನ್ನೆಲೆ ಇಲ್ಲ ಎಂದು ಪವಿತ್ರ ಗೌಡ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!
Scroll to Top