ಏಷ್ಯಾಕಪ್‌ಗೆ ಸೂರ್ಯಕುಮಾರ್‌ ಕ್ಯಾಪ್ಟನ್‌..!



(ನ್ಯೂಸ್‌ ಕಡಬ) newskadaba.com, ಆ.06:‌ ಸೆ.9ರಿಂದ ಏಷ್ಯಾಕಪ್ಟೂರ್ನಿ ಆರಂಭವಾಗಲಿದ್ದು, ಟೀಂ ಇಂಡಿಯಾವನ್ನು ಸೂರ್ಯಕುಮಾರ್ಯಾದವ್ಮುಂದುವರಿಸಲಿದ್ದಾರೆ. ಮುಂಬರುವ ಏಷ್ಯಾಕಪ್ಟಿ20 ಮಾದರಿಯಲ್ಲಿ ನಡೆಯಲಿದ್ದು, ಹಾಗಾಗಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ಅವರನ್ನೇ ಕ್ಯಾಪ್ಟನ್ಆಗಿ ಮುಂದುವರಿಸಲು ತೀರ್ಮಾನಿಸಲಾಗಿದೆ.





ಇನ್ನು ಶುಭ್ಮನ್ಗಿಲ್ಅವರಿಗೆ ಉಪನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹಿಂದೆ ಅಕ್ಷರ್ಪಟೇಲ್ಅವರು ಉಪನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ, ಇದೀಗ ಉಪನಾಯಕನನ್ನು ಬದಲಿಸಲು ಬಿಸಿಸಿಐ ಚಿಂತಿಸಿದೆ ಎನ್ನಲಾಗಿದೆ.






ಸೆ.9ರಂದು ಏಷ್ಯಾಕಪ್ ಉದ್ಘಾಟನಾ ಪಂದ್ಯ ಅಬುಧಾಬಿಯ ಶೇಖ್ಝಾಯ್ದ್ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯದಲ್ಲಿ ಒಮಾನ್ಹಾಗೂ ಹಾಂಗ್ಕಾಂಗ್ತಂಡಗಳು ಕಣಕ್ಕಿಳಿಯಲಿವೆ. ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಸೆ.10ರಂದು ಆಡಲಿದೆ. ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಯುಎಇ ತಂಡವನ್ನು ಎದುರಿಸಲಿದೆ.

ಏಷ್ಯಾಕಪ್ಟೂರ್ನಿಯ ಫೈನಲ್ಪಂದ್ಯವು ಸೆ.28ರಂದು ನಡೆಯಲಿದ್ದು, ಪಂದ್ಯ ದುಬೈನ ಇಂಟರ್ನ್ಯಾಷನಲ್ಕ್ರಿಕೆಟ್ಸ್ಟೇಡಿಯಂನಲ್ಲಿ ನಡೆಯಲಿದೆ.

error: Content is protected !!
Scroll to Top