ಕರ್ನಾಟಕಕ್ಕೆ ಬರಲಿದೆ ಮತ್ತೊಂದು ವಂದೇ ಭಾರತ್‌ ರೈಲು



(ನ್ಯೂಸ್‌ ಕಡಬ) newskadaba.com, ಆ.06:‌ ಬೆಂಗಳೂರುಬೆಳಗಾವಿ ನೂತನ ವಂದೇ ಭಾರತ್ರೈಲು ಸೇರಿದಂತೆ ಒಟ್ಟು 3 ವಂದೇ ಭಾರತ್ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು .10ರಂದು ಚಾಲನೆ ನೀಡಲಿದ್ದಾರೆ. .10ರಂದು ಕರ್ನಾಟಕ ಪ್ರವಾಸ ಕೈಗೊಂಡ ವೇಳೆ ಪ್ರಧಾನಿ ಮೋದಿ ಅವರು ಬೆಂಗಳೂರುಬೆಳಗಾವಿ ವಂದೇ ಭಾರತ್ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ಜೋಶಿ ಹೇಳಿದ್ದಾರೆ.







ಬಗ್ಗೆ ಟ್ವೀಟ್ಮಾಡಿರುವ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಭಾನುವಾರ ಕರ್ನಾಟಕ ಪ್ರವಾಸದಂದು ಮೂರು ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬೆಂಗಳೂರು – ಬೆಳಗಾವಿ, ನಾಗ್ಪುರದ ಅಜ್ನಿ- ಪೂಣಾ ಹಾಗೂ ಅಮೃತಸರ- ಶ್ರೀ ಮಾತಾ ವೈಷ್ಣವೊ ದೇವಿ ಕಟ್ರಾ ಮಧ್ಯೆ ನೂತನ ವಂದೇ ಭಾರತ್ ರೈಲು ಸಂಚರಿಸಲಿದೆ ಎಂದಿದ್ದಾರೆ.






ಈ ಹಿಂದೆ ನಾನು ಸಲ್ಲಿಸಿದ ಕೋರಿಕೆಯ ಮೇರೆಗೆ ಬೆಂಗಳೂರು – ಬೆಳಗಾವಿ ವಂದೇ ಭಾರತ್ ರೈಲಿಗೆ ಅನುಮೋದನೆ ನೀಡಲಾಗಿತ್ತು. ಬೆಳಗಾವಿಯಿಂದ ಬೆಳಗ್ಗೆ 5.20 ನಿಮಿಷಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 1.50 ನಿಮಿಷಕ್ಕೆ ಆಗಮಿಸಲಿದೆ. ಬೆಂಗಳೂರಿನಿಂದ ವಾಪಸ್ಸು ಮಧ್ಯಾಹ್ನ 2.20 ನಿಮಿಷಕ್ಕೆ ಹೊರಟು ರಾತ್ರಿ 10.40 ನಿಮಿಷಕ್ಕೆ ಬೆಳಗಾವಿಗೆ ತಲುಪಲಿದೆ. ಈ ಮೂಲಕ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯ ನಡುವೆ‌ ಸಂಪರ್ಕ ಹೆಚ್ಚಿಸಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ಹಾಗೂ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.

error: Content is protected !!
Scroll to Top