ನಾಪತ್ತೆಯಾಗಿದ್ದ 4 ವರ್ಷದ ಬಾಲಕ ಶವವಾಗಿ ಬಾವಿಯಲ್ಲಿ ಪತ್ತೆ



(ನ್ಯೂಸ್ ಕಡಬ) newdkadaba.com, ಆ. 02 ಬಳ್ಳಾರಿ: ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ಬಾಲಕ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರವಿಹಾಳ ಗ್ರಾಮದಲ್ಲಿ ನಡೆದಿದೆ. ರವಿಹಾಳ ಗ್ರಾಮದ ವೀರೇಶ್ ಪುತ್ರ ಸಿರಿ (4) ಶವವಾಗಿ ಪತ್ತೆಯಾಗಿದ್ದಾನೆ. ಸಿರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಕುಟುಂಬ ಮತ್ತು ಗ್ರಾಮಸ್ಥರು ಇಡೀ ಗ್ರಾಮವನ್ನೇ ಹುಡುಕಾಡಿದರು ಪತ್ತೆಯಾಗಿರಲಿಲ್ಲ.





ನಿನ್ನೆ ಸಂಜೆ ಬಾವಿಯಲ್ಲಿ ಸ್ಥಳೀಯರು ಶವ ತೇಲುತ್ತಿರುವುದನ್ನು ನೋಡಿದ್ದಾರೆ. ಘಟನಾ ಸ್ಥಳಕ್ಕೆ ಸದ್ಯ ಸಿರುಗುಪ್ಪಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಾಲು ಜಾರಿ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿರಬಹುದಾ ಅಥವಾ ಯಾರಾದರೂ ಕುಟುಂಬದ ಮೇಲಿನ ದ್ವೇಷದಿಂದ ಕೊಲೆ ಮಾಡಿರಬಹುದಾ ಎಂಬ ಶಂಕೆಯಿಂದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇಷ್ಟು ಸಣ್ಣ ಪ್ರಾಯದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.






error: Content is protected !!
Scroll to Top