ಕಡಬ ಪಟ್ಟಣ ಪಂಚಾಯತ್ ಚುನಾವಣೆ ಹಿನ್ನೆಲೆ ಐಯುಎಂಲ್ ಪಕ್ಷದ ಚುನಾವಣಾ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಜು. 24. ಕಡಬ ಪಟ್ಟಣ ಪಂಚಾಯತ್ ಚುನಾವಣೆಯು ಅಗಸ್ಟ್ 17 ರಂದು ನಡೆಯಲಿದ್ದು, ಚುನಾವಣೆ ಘೋಷಣೆ ಹಿನ್ನಲೆ ಗೌಪ್ಯವಾಗಿ ನಡೆಯುತ್ತಿದ್ದ ಚುನಾವಣಾ ಪೂರ್ವ ತಯಾರಿಯ ಪೂರ್ವಭಾವಿ ಸಭೆಯು ಇಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಲ್) ಜಿಲ್ಲಾ ಅಧ್ಯಕ್ಷರಾದ ಸಿ. ಅಬ್ದುಲ್ ರಹಮಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಚುನಾವಣಾ ಪೂರ್ವ ತಯಾರಿಯ ಕುರಿತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಸಿದ್ದೀಕ್ ಕೊರುಂದೂರು ಕಡಬ ಇವರು ಸವಿಸ್ತಾರವಾಗಿ ಮಾಹಿತಿ ನೀಡಿದರು. ಜಿಲ್ಲಾ ಸಮಿತಿಯ ನಿರ್ದೇಶನದಂತೆ 13 ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಲಾಯಿತು. ರಾಜ್ಯ ಮತ್ತು ಜಿಲ್ಲಾ ಸಮಿತಿಗಳ ಬೆಂಬಲ ಮತ್ತು ಸಹಕಾರದ ಕುರಿತು ಐಯುಎಂಲ್ ಜಿಲ್ಲಾ ಕಾರ್ಯದರ್ಶಿ ಮತ್ತು ಮುಸ್ಲಿಂ ಯೂತ್ ಲೀಗ್ ರಾಜ್ಯ ಕಾರ್ಯದರ್ಶಿ ನೌಶಾದ್ ಮಲಾರ್ ಮತನಾಡಿದರು. ಪಕ್ಷ ಸಂಘಟನೆಯ ಕುರಿತು ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ ಮಾತನಾಡಿದರು.

ಸಭೆಯಲ್ಲಿ ಹಿರಿಯ ನಾಯಕರಾದ ಇಸ್ಮಾಯಿಲ್ ಬಂದರು, ಕೆ.ಸಿ ಅಬ್ದುಲ್ ಖಾದರ್, ಹನೀಫ್ ಕುಂಜತ್ತೂರು, ನಿಸಾರ್ ಬೆಂಗರೆ ಮತ್ತು ಇತರ ನಾಯಕರು ಭಾಗವಹಿಸಿದರು.

Scroll to Top