ಗಾಯದಿಂದ ನಿವೃತ್ತಿಗೆ ಮುನ್ನ ವಿಶ್ವದಾಖಲೆ ಸೃಷ್ಟಿಸಿದ ರಿಷಭ್ ಪಂತ್..!



(ನ್ಯೂಸ್ ಕಡಬ) newskadaba.com ಜು. 24. ಭಾರತದ ಯುವ ಬ್ಯಾಟ್ಸ್ ಮ್ಯಾನ್ ಸಾಯಿ ಸುದರ್ಶನ್ ಅರ್ಧಶತಕ ಗಳಿಸುವ ಮೂಲಕ ತಮಗೆ ದೊರೆತ ಮತ್ತೊಂದು ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಮತ್ತೊಂದು ಗಂಭೀರ ಗಾಯಕ್ಕೆ ತುತ್ತಾಗಿ ಕ್ರೀಸ್ ನಿಂದ ನಿರ್ಗಮಿಸುವ ಮುನ್ನ ವಿಶ್ವದಾಖಲೆ ಸೃಷ್ಟಿಸಿದರು.





ಹಳೆಯ ಟೆಸ್ಟ್ ಶೈಲಿಗೆ ಮೊರೆ ಹೋದ ಭಾರತ 83 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತು. ಇದು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದ ಹೈಲೈಟ್ಸ್. ದೇಶದಿಂದ ಹೊರಗೆ 1000 ರನ್ ಗಳಿಸಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾದರು. ಈ ಹೊಸ ಮೈಲುಗಲ್ಲು ತಲುಪುವ ನಿಟ್ಟಿನಲ್ಲಿ ಪಂತ್ ತಮ್ಮದೇ ದಾಖಲೆಯನ್ನು ಮುರಿದರು. ಈ ಮುನ್ನ ಆಸ್ಟ್ರೇಲಿಯಾದಲ್ಲಿ 879 ರನ್ ಗಳಿಸಿದ್ದು ದಾಖಲೆಯಾಗಿತ್ತು.






ಆಟದ ಲಯ ಕಂಡುಕೊಳ್ಳುವ ಹಂತದಲ್ಲಿ ಕ್ರಿಸ್ ವೋಕ್ಸ್ ಎಸೆತವನ್ನು ರಿವರ್ಸ್ ಹೊಡೆಯುವಲ್ಲಿ ಎಡವಿ ಗಾಯಗೊಂಡರು. ಬಲ ಪಾದಕ್ಕೆ ತೀವ್ರ ಗಾಯವಾಗಿರುವ ಪಂತ್ ಅವರನ್ನು ಮೈದಾನದಿಂದ ವಾಹನದಲ್ಲಿ ಕರೆದೊಯ್ಯಲಾಯಿತು.

error: Content is protected !!
Scroll to Top