ಚಲಿಸುತ್ತಿದ್ದ ಪಿಕಪ್ ಮೇಲೆ ಮರ ಬಿದ್ದು ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಜು. 24. ಚಲಿಸುತ್ತಿದ್ದ ಪಿಕಪ್ ವಾಹನದ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದ ಪರಿಣಾಮ ಪಿಕಪ್ ವಾಹನ ಸಂಪೂರ್ಣ ಹಾನಿಗೀಡಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ಕಾಳವರ ಗ್ರಾಮದ ಕಟ್ಕೇರಿ ಶಾಲೆ ಸಮೀಪ ನಡೆದಿದೆ.

ಗಾಯಗೊಂಡ ಚಾಲಕನನ್ನು ಆನಗಳ್ಳಿಯ ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ.

ಚಾಲಕ ಹರೀಶ್ ತನ್ನ ಪತ್ನಿ ಮನೆಯಾದ ಸಳ್ವಾಡಿಯಿಂದ ಬೆಳಗ್ಗೆ ತಮ್ಮ ಪಿಕಪ್ ವಾಹನದಲ್ಲಿ ಮಲ್ಪೆಗೆ ಮೀನು ತರಲೆಂದು ಹೊರಟಿದ್ದರು ಎನ್ನಲಾಗಿದೆ. ಕಾಳಾವರ ಗ್ರಾಮದ ಕಟ್ಕೇರಿ ಎಂಬಲ್ಲಿಗೆ ಬರುತ್ತಿದ್ದಂತೆ ಚಲಿಸುತ್ತಿದ್ದ ಪಿಕಪ್ ವಾಹನದ ಮೇಲೆ ಬೃಹತ್ ಮರ ಅಡ್ಡಲಾಗಿ ಬಿದ್ದಿದೆ. ಪರಿಣಾಮ ಪಿಕ್ ಅಪ್ ವಾಹನದ ಮೇಲ್ಭಾಗ ನುಜ್ಜುಗುಜ್ಜಾಗಿದೆ.

Scroll to Top