ಮಹಾನಗರಪಾಲಿಕೆ ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಸ್ಥಾನಕ್ಕೆ ಅರ್ಜಿ ಆಹ್ವಾನ



(ನ್ಯೂಸ್ ಕಡಬ) newskadaba.com ಮಂಗಳೂರು, ಜು. 21. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗಡೆ  ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನಗರದ ವ್ಯಾಪ್ತಿಯೊಳಗಡೆ ಕನಿಷ್ಠ 5 ವರ್ಷ ಬೀದಿಬದಿ ವ್ಯಾಪಾರದಲ್ಲಿ ತೊಡಗಿದ್ದು, ಈಗಾಗಲೇ ನಗರದಲ್ಲಿ ಕಾರ್ಯಚರಿಸುತ್ತಿರುವ ಬೀದಿಬದಿ ವ್ಯಾಪಾರಸ್ಥರ ಸಂಘ ಅಥವಾ ಒಕ್ಕೂಟದ ಸದಸ್ಯರುಗಳಿಂದ ಮೀಸಲಾತಿ ಪ್ರಕಾರ ಸಾಮಾನ್ಯ-1 ಹಿಂದುಳಿದ ವರ್ಗ-1, ಪರಿಶಿಷ್ಠ ಜಾತಿ-1, ಪರಿಶಿಷ್ಟ ಪಂಗಡ-1, ಅಲ್ಪಸಂಖ್ಯಾತರು-2, ಮಹಿಳೆ-3 ಮತ್ತು ಅಂಗವಿಕಲರು-1, ಕೇಂದ್ರ ಸರಕಾರ ಪುರಸ್ಕೃತ DAY NULM/ DJAY S ಯೋಜನೆಯ ಅಡಿಯಲ್ಲಿ ಸ್ಥಾಪಿತಗೊಂಡಿರುವ ಮಹಿಳಾ ALF/SHG ಸದಸ್ಯರು, ಕನಿಷ್ಠ 5 ವರ್ಷಗಳಿಂದ ಸಮಾಜಸೇವೆಯಲ್ಲಿ ಕಾರ್ಯಾಚರಿಸುತ್ತಿರುವ ಸರ್ಕಾರೇತರ ಸ್ವಯಂ ಸೇವಾಸಂಸ್ಥೆಯ ಪ್ರತಿನಿಧಿ – ಬೀದಿಬದಿ ವ್ಯಾಪಾರಿಗಳೊಂದಿಗೆ ಕಾರ್ಯನಿರ್ವಹಿಸುವ ಸಂಸ್ಥೆಗೆ ಆದ್ಯತೆ ನೀಡಲಾಗುತ್ತದೆ. ಕನಿಷ್ಠ 5 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಮಂಗಳೂರು ಮಹಾನಗರ ವ್ಯಾಪ್ತಿಯೊಳಗಡೆಯ ಸಮಾಜ ಕಾರ್ಯಕರ್ತರು/ ಸೇವಕರು, ಟ್ರೇಡ್ ಯೂನಿಯನ್ ಪ್ರತಿನಿಧಿ, ಹೋಟೆಲ್ ಮಾಲಕರ ಸಂಘದ ಪ್ರತಿನಿಧಿ, ಮಾರುಕಟ್ಟೆ ಅಥವಾ ವ್ಯಾಪಾರಸ್ಥರ ಸಂಘಟನೆಯ ಪ್ರತಿನಿಧಿ ಅರ್ಜಿ ಸಲ್ಲಿಸಬಹುದು.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗಡೆಯ ಆಸಕ್ತರು  ಜುಲೈ 25ರೊಳಗಡೆ  ಸ್ವಯಂ ಲಿಖಿತ ಅರ್ಜಿಯನ್ನು ಮಂಗಳೂರು ಮಹಾನಗರಪಾಲಿಕೆ ಕಾರ್ಯಾಲಯದ ಡೇ-ನಲ್ಮ್ ಯೋಜನೆ ಸಮುದಾಯ ವ್ಯವಹಾರಗಳ ಅಧಿಕಾರಿ ಕಛೇರಿಗೆ ಭೇಟಿ ನೀಡಿ ಅರ್ಜಿ ಅಥವಾ ಇ-ಮೇಲ್ commissioner mec@gmail.com ಮುಖಾಂತರ ಸಲ್ಲಿಸಬಹುದು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







error: Content is protected !!
Scroll to Top