(ನ್ಯೂಸ್ ಕಡಬ) newskadaba.com ಜು. 21. ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ(ಟ್ರಸ್ಟ್) ವಿಟ್ಲ ತಾಲೂಕಿನ ಅಳಿಕೆ ವಲಯದ ಪರಿಯಲ್ತಡ್ಕ ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮವು ದ.ಕ.ಜಿ.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಣಚ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬೇಬಿರವರು ವಹಿಸಿದ್ದರು. ದ.ಕ.ಜಿ.ಪಂ. ಶಾಲೆ ದೇವಿನಗರ ಇಲ್ಲಿಯ ನಿವೃತ್ತ ಶಿಕ್ಷಕರಾದ ಗಂಗಮ್ಮರವರು ಉದ್ಘಾಟಿಸಿದರು. ಅಳಿಕೆ ವಲಯದ ಮೇಲ್ವಿಚಾರಕರಾದ ಮೀನಾಕ್ಷಿ ಪ್ರಾಸ್ತಾವಿಕ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ್ ರವರು ಯೋಜನೆ ಪ್ರತಿನಿಧಿ ಸಾಲಗಳಿಗೆ ವಿಧಿಸುವ ಬಡ್ಡಿದರದ ಬಗ್ಗೆ ವಿವರಿಸಿದರು.
ಒಕ್ಕೂಟದ ಹಾಗೂ ಸಂಘಗಳಿಗೆ ನೀಡುವ ಗ್ರೇಡಿಂಗ್ ಸಂಘದ ದಾಖಲಾತಿಯ ಬಗ್ಗೆ ತಿಳಿಸಿದರು. ನಿರ್ಗತಿಕ ಕುಟುಂಬಗಳಿಗೆ ಮಾಶಾಸನ, ಜನಮಂಗಳ ಕಾರ್ಯಕ್ರಮದಡಿ ವಾಟರ್ ಬೆಡ್, ವಾಕರ್ ಸ್ಟಿಕ್, ವೀಲ್ ಚೇರ್, ಕಮಾಡೋ ವೀಲ್ ಚೇರ್ ಮುಂತಾದ ಉಪಕರಣಗಳ ಅನುದಾನದ ಬಗ್ಗೆ ತಿಳಿಸಿದರು. ಸಂಘದ ಹಿರಿಯ ಸದಸ್ಯರನ್ನು ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘದ ಸದಸ್ಯರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಸುರೇಶ್ ಗೌಡ, ಅಳಿಕೆ ವಲಯದ್ಯಕ್ಷರಾದ ರಾಜೇಂದ್ರ ರೈ, ಒಕ್ಕೂಟದ ಅಧ್ಯಕ್ಷರಾದ ಶಿವಪ್ಪ ಮೂಲ್ಯ, ಒಕ್ಕೂಟದ ಪದಾಧಿಕಾರಿಯವರು, ಸದಸ್ಯರು, ಸೇವಾಪ್ರತಿನಿಧಿ ವಿನಯ ರೈ, ಮುಳಿಯ ಒಕ್ಕೂಟದ ಅಧ್ಯಕ್ಷರಾದ ಉದಯ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಉಪಸ್ಥಿತರಿದ್ದರು. ಮುಳಿಯ ಒಕ್ಕೂಟದ ಸದಸ್ಯರಾದ ಮಮತರವರು ಕಾರ್ಯಕ್ರಮ ನಿರ್ವಹಿಸಿ, ರಾಜೇಶ್ವರಿಯವರು ವರದಿ ಮಂಡಿಸಿದರು. ಒಕ್ಕೂಟದ ಕಾರ್ಯದರ್ಶಿ ಸ್ವಾಗತಿಸಿ ಸುಶೀಲರವರು ಧನ್ಯವಾದಗೈದರು.









