ಬೆಂಗಳೂರು: ಬರೋಬ್ಬರಿ 40 ಶಾಲೆಗಳಿಗೆ ಬಾಂಬ್ ಬೆದರಿಕೆ



(ನ್ಯೂಸ್ ಕಡಬ) newskadaba.com,ಜು .18. ಬೆಂಗಳೂರು: ಬೆಂಗಳೂರಿನಲ್ಲಿ ಬರೋಬ್ಬರಿ 40 ಖಾಸಗಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ ಆಗಮಿಸಿದ್ದು. ಒಂದೇ ರೀತಿಯ ಬೆದರಿಕೆ ಇಮೇಲ್ ಆಗಮಿಸಿದ್ದು, ಪೋಷಕರು ಹಾಗೂ ಶಾಲಾ ನಿರ್ವಹಣಾ ಮಂಡಳಿಯಲ್ಲಿ ಭೀತಿ ವಾತಾವರಣ ಸೃಷ್ಟಿಯಾಗಿದೆ. Roadkill333atomic@mail.com ಎಂಬ ಇಮೇಲ್ ಐಡಿಯಿಂದ ಈ ಬೆದರಿಕೆ ಸಂದೇಶ ರವಾನೆಯಾಗಿದ್ದು, ಆರ್‌ಆರ್ ನಗರ ಮತ್ತು ಕೆಂಗೇರಿ ಭಾಗದ ಶಾಲೆಗಳು ಇದರ ಗುರಿಯಾಗಿವೆ ಎಂದು ಮೂಲಗಳು ತಿಳಿಸಿವೆ.





ಅಪರಿಚಿತ ವ್ಯಕ್ತಿಯು ಇಮೇಲ್‌ನಲ್ಲಿ ಹಿಂಸೆ ಪ್ರಚೋದಿಸುವ ಪದಗಳನ್ನು ಬಳಸಿದ್ದಾನೆ. ಶಾಲಾ ತರಗತಿಗಳಲ್ಲಿ ಬ್ಲಾಕ್ ಬಣ್ಣದ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಸ್ಪೋಟಕಗಳನ್ನು ಇಡಲಾಗಿದೆ. ನಾನು ಪ್ರಪಂಚದ ಪ್ರತಿಯೊಬ್ಬರನ್ನು ಅಳಿಸಿ ಹಾಕುತ್ತೇನೆ. ಈ ಸುದ್ದಿ ನೋಡಿದಾಗ ನಾನು ನಗುತ್ತೇನೆ, ಸಂತೋಷಪಡುವೆ. ಪೋಷಕರು ತಮ್ಮ ಮಕ್ಕಳ ವಿಕಲಾಂಗ ಸ್ಥಿತಿಯನ್ನು ನೋಡಬೇಕು. ನೀವು ಎಲ್ಲರೂ ಕಷ್ಟ ಅನುಭವಿಸಲು ಅರ್ಹರು. ಈ ಸುದ್ದಿ ಹರಡಿದ ನಂತರ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೋಸ್ಟ್ ಮಾಡಿದ್ದಾನೆ.






ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿ ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ನಾನು ಈ ಕುರಿತು ಯಾವುದೇ ಹೇಳಿಕೆ ನೀಡಲ್ಲ. ಇದು ಕಾನೂನು ಮತ್ತು ತನಿಖಾ ಸಂಸ್ಥೆಗಳ ಕಾರ್ಯಕ್ಷೇತ್ರ. ಅವರು ತಕ್ಕ ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

error: Content is protected !!
Scroll to Top