ಚಿನ್ನದ ದರದಲ್ಲಿ ಕೊಂಚ ಇಳಿಕೆ



(ನ್ಯೂಸ್ ಕಡಬ) newskadaba.com, ಜು.15. ಬೆಂಗಳೂರು: ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡಿದೆ. ಚಿನ್ನದ ದರದಲ್ಲಿ ಇಂದು (ಜು. 15) ಮತ್ತೆ ಇಳಿಕೆ ಕಂಡು ಬಂದಿದ್ದು, ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಇಳಿಕೆಯಾಗಿದೆ.







ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 9,145ರೂ ಕ್ಕೆ ತಲುಪಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನ 11 ರೂ. ಇಳಿಕೆ ಕಂಡು, 9,977 ರೂ.ಗೆ ಬಂದು ಮುಟ್ಟಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 73,160 ರೂ. ಬಾಳಿದರೆ, 10 ಗ್ರಾಂಗೆ ನೀವು 91,450 ರೂ. ಹಾಗೂ 100 ಗ್ರಾಂಗೆ 9,14,500 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನ 79,816 ರೂ. 10 ಗ್ರಾಂಗೆ ನೀವು 99,770 ರೂ. ಮತ್ತು 100 ಗ್ರಾಂಗೆ 9,97,700 ರೂ. ಪಾವತಿಸಬೇಕಾಗುತ್ತದೆ.






error: Content is protected !!
Scroll to Top